ಪುತ್ತೂರು: ಸಂಪ್ಯದ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಸುನ್ನತ್ (ಮುಂಜಿ) ಶಿಬಿರ ಸೆ.24ರಂದು ನಡೆಯಿತು. ಖ್ಯಾತ ಮಕ್ಕಳ ತಜ್ಞ ಡಾ.ನೂರುಲ್ಲಾ ಶಿಬಿರವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ತಾಕಿಯ ನುಝತ್, ಡಾ.ರಯ್ಯನ್ ಶಾ, ಸೋನಿಯ ಸಿಸ್ಟರ್ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಮೆಡ್ ಲ್ಯಾಂಡ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಅಶ್ಮೀರ್ ಕಮ್ಮಾಡಿ, ವೈದ್ಯರಾದ ಡಾ.ವಿಶಾಲ್ ಯು ಪಿ, ಡಾ ಸುಜನ್ ಜೆ ಶೆಟ್ಟಿ, ಕಾನೂನು ಸಲಹೆಗಾರ ಮೂಸೆ ಕುಂಞಿ, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಸಂಕೇಶ್ ಬೆಂಗಳೂರು, ಸಾಮಾಜಿಕ ಕಾರ್ಯಕರ್ತ ನಿಸಾರ್ ಸಂಪ್ಯ, ಮೇಕ್ ಎ ಚೇಂಜ್ ಫೌಂಡೇಶನ್ ಪುತ್ತೂರು ಇದರ ಅಧ್ಯಕ್ಷ ಆಶಿಕ್ ಸಂಪ್ಯ, ಆಂಬುಲೆನ್ಸ್ ಚಾಲಕ ಶಾಫಿ ಸಂಪ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸನ್ಮಾನ:
ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ಗುರುತಿಸಿ ಅಲ್ ಖಲೀಜ್ ಟ್ರಾವೆಲ್ಸ್ ಇದರ ಮಾಲಕ ನಿಸಾರ್ ಸಂಪ್ಯ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಬ್ದುಲ್ ರಝಾಕ್ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.