ಸೆ. 26: ‘ರಂಗ್ ನೀರ್ಪಾಡಿ’ ವತಿಯಿಂದ ಎಲೆಚುಕ್ಕಿ ರೋಗ, ನುಸಿರೋಗ ನಿರ್ಮೂಲನೆ ಬಗ್ಗೆ ಅಡಿಕೆ ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಅಡಿಕೆ ಬೆಳೆಯನ್ನು ಬಾಧಿಸುತ್ತಿರುವ ಎಲೆಚುಕ್ಕಿ ರೋಗ, ನುಸಿರೋಗ ನಿರ್ಮೂಲನೆಯ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಒಳಮೊಗ್ರು ಗ್ರಾಮದ ನೀರ್ಪಾಡಿಯ ‘ರಂಗ್‌ ನೀರ್ಪಾಡಿ’ ತಂಡದಿಂದ ಅಡಿಕೆ ಬೆಳೆಗಾರರಿಗೆ ಮಾಹಿತಿ‌ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಸೆ.26ರಂದು ಬೆಳಗ್ಗೆ 10 ಗಂಟೆಗೆ ಒಳಮೊಗ್ರು ಗ್ರಾಮದ ನೀರ್ಪಾಡಿ ತರವಾಡು ಮನೆಯಲ್ಲಿ ‌ಕಾರ್ಯಾಗಾರ ಆಯೋಜಿಸಲಾಗಿದ್ದು, ಕೃಷಿ ವಿಜ್ಞಾನಿ ಡಾ| ವಿಶುಕುಮಾರ್ ಅವರು ಅಡಿಕೆ‌ ಮರಗಳನ್ನು ಬಾಧಿಸುತ್ತಿರುವ ಎಲೆಚುಕ್ಕಿ ರೋಗ, ಮತ್ತು‌ ನುಸಿರೋಗ ನಿಯಂತ್ರಣದ ಬಗ್ಗೆ ಮಾಹಿತಿ‌‌ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 8139900214, 9886495008 ನ್ನು ಸಂಪರ್ಕಿಸಬಹುದು. ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here