ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗೆ ವಿಜಯ ದಶಮಿ ಕೊಡುಗೆ

0

ಪುತ್ತೂರು: ವರುಷಕ್ಕೊಮ್ಮೆ ಬರುವ ಹಬ್ಬಗಳು ನಮ್ಮ ಮನಸ್ಸನ್ನು ಮುದಗೊಳಿಸುವುದರ ಜೊತೆಗೆ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಅದೇ ರೀತಿ ವ್ಯವಹಾರಿಕ ಕ್ಷೇತ್ರದಲ್ಲೂ ವರ್ಷಕ್ಕೊಮ್ಮೆ ನಡೆಸುವ ವಿಶೇಷ ವಾರ್ಷಿಕ ಮಾರಾಟ ಉತ್ಸವಗಳಿಂದ ಸಂಸ್ಥೆ ಮತ್ತು ಗ್ರಾಹಕರ ಚಿನ್ನದಂತಹ ಬಾಂಧವ್ಯವನ್ನು ಇನ್ನಷ್ಟು ಹೊಳಪನ್ನಾಗಿ ಮಾಡುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ವಿಜಯ ದಶಮಿ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಿದೆ.


ಸೆ.27ರಿಂದ ಈ ಕೊಡುಗೆ ಪ್ರಾರಂಭವಾಗಲಿದ್ದು, ಅ.5 ರವರೆಗೆ ಗ್ರಾಹಕರು ಆಫರ್ ಮೂಲಕ ಚಿನ್ನಾಭರಣಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಮಳಿಗೆ ಮೊ.ನಂ. 8748877360ಕ್ಕೆ ಸಂಪರ್ಕಿಸಬಹುದಾಗಿದೆ. ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಈ ಸಂಸ್ಥೆಯಲ್ಲಿ ಮದುಮಗಳ ಅಲಂಕಾರ ಆಭರಣಗಳ ವಿನೂತನ ಸಂಗ್ರಹ, ಪ್ರಾಚಿ ಇಲೈಟ್ ಮತ್ತು ಲೈಟ್‌ವೈಟ್ ಆಭರಣಗಳು ಸಹ ಲಭ್ಯವಿದೆ. ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿಯೂ ತಮ್ಮ ಮಳಿಗೆಯನ್ನು ಹೊಂದಿದ್ದು, ಈ ಮಳಿಗೆಗಳಲ್ಲೂ ವಿಜಯ ದಶಮಿ ಕೊಡುಗೆ ಷರತ್ತು ಅನ್ವಯದೊಂದಿಗೆ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಪ್ರತಿ ಹಬ್ಬಗಳು ಹಾಗೂ ವಿಶೇಷ ದಿನಾಚರಣೆಗಳ ಸಂದರ್ಭಗಳಲ್ಲಿ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ಆಫರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು ಹಾಗೂ ಬೆಳ್ಳಿ ಆಭರಣಗಳು ಇಲ್ಲಿ ಲಭ್ಯವಿದೆ.

ಜಿಎಲ್ ವಿಜಯ ದಶಮಿ ಕೊಡುಗೆ
ಪ್ರತಿ 8 ಗ್ರಾಂ ಚಿನ್ನಾಭರಣಗಳ ಮೇಲೆ 2400 ರೂ. ಫ್ಲಾಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೇಟ್‌ಗೆ 5000 ರೂ. ಫ್ಲಾಟ್ ಡಿಸ್ಕೌಂಟ್ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆಜಿಗೆ 3000 ರೂ. ಫ್ಲಾಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here