ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಪುತ್ತೂರು ತಾಲೂಕಿನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ದ.ಕ ಜಿಲ್ಲೆಯನ್ನೊಳಗೊಂಡ ಪುತ್ತೂರು ತಾಲೂಕಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.


2025-26 ನೇ ಸಾಲಿನ ಪ್ರಥಮ ಅಧ್ಯಕ್ಷರಾಗಿ ಆಶಾ ಮಯ್ಯ ಪುತ್ತೂರು, ಉಪಾಧ್ಯಕ್ಷರಾಗಿ ಫ್ರಣವ್ ಭಟ್, ಕಾರ್ಯದರ್ಶಿಯಾಗಿ ಯಶುಭ ರೈ, ಜತೆಕಾರ್ಯದರ್ಶಿಯಾಗಿ ಅಕ್ಷತಾ ನಾಗನ ಕಜೆ , ಕೋಶಾಧಿಕಾರಿಯಾಗಿ ಸುನೀತಾ ಶ್ರೀರಾಮ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ವೇತಾ ಬೆಳ್ಳಿಪ್ಪಾಡಿ, ಸಾಹಿತ್ಯಿಕ ಕಾರ್ಯದರ್ಶಿಯಾಗಿ ಶ್ರೀಮತಿ ಪುತ್ತೂರು, ಮಾಧ್ಯಮ ಪ್ರತಿನಿಧಿಯಾಗಿ ಮಂಜುಳಾ ಮುರಳೀಕೃಷ್ಣ ಆಯ್ಕೆಯಾಗಿದ್ದಾರೆ.


ಆಯ್ಕೆಯಲ್ಲಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿದ.ಕ ಜಿಲ್ಲಾ ಅಧ್ಯಕ್ಷರಾದ ವಿಂಧ್ಯಾ ಎಸ್.ರೈ ಕಡೇಶಿವಾಲಯ, ಉಪಾಧ್ಯಕ್ಷರಾದ ಅನಿತಾ ಶೆಟ್ಟಿ ಮೂಡುಬಿದಿರೆ, ರಾಜ್ಯ ಪ್ರತಿನಿಧಿಗಳಾದ ಹೆಚ್ಕೆ ನಯನಾಡು, ಆಶಾ ಅಡೂರು, ಉಮಾ ಸುನಿಲ್ ಹಾಸನ, ಭಾರತಿ ಪರ್ಕಳ, ಜಿಲ್ಲಾ ನಿರ್ದೇಶಕರಾದ ಚೇತನ್ ಕುಮಾರ್ ಅಮೈ ಸಹಕರಿಸಿದರು.

LEAVE A REPLY

Please enter your comment!
Please enter your name here