ಬಡಗನ್ನೂರು: ದರ್ಬೆತ್ತಡ್ಕ ಇಲ್ಲಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಶಾರದಾ ಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮ ಸೆ.23ರಂದು ನಡೆಯಿತು.

ಬೆಳಗ್ಗೆ ಶ್ರೀ ಮಹಾಮ್ಮಾಯಿ ಮಾರಾಠಿ ಕುಣಿತ ಭಜನಾ ಸಂಘ ಮುಡಾಲ ಇವರಿಂದ ಭಜನಾ ಸೇವೆ ನಡೆದು ಶ್ರೀ ಶಾರದಾ ದೇವಿಗೆ ಮಹಾಮಂಗಳಾರತಿ ನಡೆಯಿತು. ಬಳಿಕ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಯಿತು.
ಪುರೋಹಿತರಾದ ಸುಬ್ರಹ್ಮಣ್ಯ ಭಟ್ ಅಡ್ಕತ್ತಿಮಾರ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂಧರ್ಭದಲ್ಲಿ ಒಳಮೂಗ್ರು ಗ್ರಾ. ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸದಸ್ಯೆ ಶಾರದಾ, ಎಸ್ ಡಿಯಂಸಿ ಅಧ್ಯಕ್ಷ ಶುಭಕರ ನಾಯಕ್ ಡಿ. ಉಪಾಧ್ಯಕ್ಷೆ ರಾಜೇಶ್ವರಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವನಂತ ಶೆಟ್ಟಿ ಕಲ್ಲಡ್ಕ, ಪ್ರಮುಖರಾದ ವಸಂತ ಮಣಿಯಾಣಿ ಕೊಪ್ಪಳ, ಪ್ರಭಾತ್ ರೈ ಸೇರ್ತಾಜೆ, ರಮೇಶ್ ಸುವರ್ಣ, ಜಯರಾಮ ಪೂಜಾರಿ ಕುಕ್ಕುತ್ತಡಿ, ಶ್ರೀಧರ ಪೂಜಾರಿ ಕುಕ್ಕುತ್ತಡಿ ಉಪಸ್ಥಿತರಿದ್ದರು.
ರವಿ ದರ್ಬೆ, ನಾರಾಯಣ ನಾಯ್ಕ ಹಾಗೂ ಸತೀಶ್ ಮಣಿಯಾಣಿ ಕೊಪ್ಪಳ ಇವರ ಪ್ರಯೋಜಕತ್ವದಲ್ಲಿ ಮಧ್ಯಾಹ್ನದ ವಿಶೇಷ ಭೋಜನದ ವ್ಯವಸ್ಥೆ ನೆರವೇರಿತು. ಎಸ್ ಡಿಯಂಸಿ ಸದಸ್ಯರು, ಪೋಷಕರು, ಮಕ್ಕಳು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳು ಸಹಕರಿಸಿದರು.