ಪುತ್ತೂರು: ಉತ್ತರ ಪ್ರದೇಶ, ಮಥುರಾದ ಗೋವರ್ಧನ ಮಾರ್ಗದಲ್ಲಿರುವ ಶ್ರೀ ಜೀ ಬಾಬಾ ಸರಸ್ವತಿ ವಿದ್ಯಾಮಂದಿರದಲ್ಲಿ ನವೆಂಬರ್ 13ರಿಂದ 16ರವರೆಗೆ ವಿದ್ಯಾಭಾರತಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ.ಯ 9ನೇ ತರಗತಿ ವಿದ್ಯಾರ್ಥಿನಿ ದೃಶಾನ ಎಸ್. ಸರಳಿಕಾನ ಅವರು ಕಿಶೋರ ವರ್ಗದ ಬಾಲಕಿಯರ 52 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ದೃಶಾನ ಅವರು ಬೆಟ್ಟಂಪಾಡಿ ಗ್ರಾಮದ ಸರಳಿಕಾನದ ಸುರೇಶ್ ಗೌಡ ಸರಳೀಕಾನ ಮತ್ತು ವಿದ್ಯಾಶ್ರೀ ದಂಪತಿಗಳ ಪುತ್ರಿ. ದೃಶಾನ ಜನವರಿಯಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ಎಸ್.ಜೆ.ಎಫ್.ಐ. (ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ) ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
