ಪುತ್ತೂರು: ಕಾರೊಂದು ಬೈಕ್ ಗೆ ಡಿಕ್ಕಿಯಾಗಿ, ಡಿವೈಡರ್ ಮೇಲೆ ಏರಿ ದೇವರ ಕಟ್ಟೆಗೆ ಡಿಕ್ಕಿಯಾದ ಘಟನೆ ದರ್ಬೆಯ ಅಶ್ವಥ ಕಟ್ಟೆ ಬಳಿ ಸೆ.26ರಂದು ನಡೆದಿದೆ.

ಕಾಣಿಯೂರು ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಎದುರಿನಿಂದ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿ ಬಳಿಕ ಡಿವೈಡರ್ ಮೇಲೆ ಹತ್ತಿ ಕಟ್ಟೆಗೆ ಡಿಕ್ಕಿ ಹೊಡೆದಿದೆ.
ಬೈಕ್ ನಲ್ಲಿದ್ದ ಇಬ್ಬರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಕಾರಿನಲ್ಲಿದ್ದ ಮೂವರೂ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆಂದು ತಿಳಿದು ಬಂದಿದೆ.