ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮುಂಡೂರು ಘಟಕ ಇದರ ಜಂಟಿ ಆಶ್ರಯದಲ್ಲಿ ಲೋಕಕಲ್ಯಾಣರ್ಥವಾಗಿ ಡಿ.27ರಂದು ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಬಿಡುಗಡೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಇವರ ನೇತೃತ್ವದಲ್ಲಿ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಶ್ರೀ ಮೃತ್ಯುಂಜಯೇಶ್ವರ ದೇವರಲ್ಲಿ ಪ್ರಧಾನ ಅರ್ಚಕ ನಿರಂಜನ್ ಭಟ್ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ನೀಲಪ್ಪ ಪೂಜಾರಿ ಕುರೆಮಜಲು, ಗೌರವಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನುಜಿ, ಕಾರ್ಯಧ್ಯಕ್ಷ ಬಾಲಚಂದ್ರ ಸೊರಕೆ, ಕೋಶಾಧಿಕಾರಿ ಅವಿನಾಶ್ ಕೇದಗೆದಡಿ, ಸಂಚಾಲಕ ಬಾಲಕೃಷ್ಣ ಪೂಜಾರಿ ಕುರೆಮಜಲು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮುಂಡೂರು ಘಟಕ ಅಧ್ಯಕ್ಷ ಬಾಲಚಂದ್ರ ಗೌಡ ಕಡ್ಯ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರು ಅಶೋಕ್ ಕುಮಾರ್ ಪುತ್ತಿಲ ಹಾಗೂ ಪೂಜಾ ಸಮಿತಿಯ ಸದಸ್ಯರಾದ ಕೂಸಪ್ಪ ಪೂಜಾರಿ ಕುರೆಮಜಲು, ಚಂದ್ರಶೇಖರ ಪೂಜಾರಿ ಕುರೆಮಜಲು, ಹರೀಶ್ ಪೂಜಾರಿ ಹಿಂದಾರು, ಜನಾರ್ಧನ ಕುರೆಮಜಲು, ಮೋನಪ್ಪ ಗೌಡ ಗುತ್ತಿನಪಾಲು, ಜಗದೀಶ್ ಕಲ್ಲಮ, ನಾರಾಯಣ ನಾಯ್ಕ ಪುಳಿಂಕೇತಡಿ, ಪ್ರತೀಕ್ ಪುತ್ತಿಲ, ಲೀಲಾವತಿ ನರಿಮೊಗರು, ಧನಂಜಯ ಕಲ್ಲಮ ಉಪಸ್ಥಿತರಿದ್ದರು.
