ಜನ್ಮ ಕ್ರಿಯೇಷನ್ ಅರ್ಪಿಸುವ ಡಾ.ಹರ್ಷ ಕುಮಾರ್ ರೈ ನಿರ್ಮಾಣದ ‘ಇರ್ದೆ ವಿಷ್ಣುಮೂರ್ತಿ’ ತುಳು ಭಕ್ತಿಗೀತೆಯ ಪೋಸ್ಟರ್ ಅನಾವರಣ

0

ಪುತ್ತೂರು: ಜನ್ಮ ಕ್ರಿಯೇಷನ್ ಪುತ್ತೂರು ಅರ್ಪಿಸುವ, ಡಾ.ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿಬಂದಿರುವ ಇರ್ದೆ ಶ್ರೀ ವಿಷ್ಣುಮೂರ್ತಿ ದೇವರ ಕುರಿತಾದ ಮೊಟ್ಟ ಮೊದಲ ತುಳು ಭಕ್ತಿಗೀತೆ ‘ ಇರ್ದೆ ವಿಷ್ಣುಮೂರ್ತಿ’ ಇದರ ಪೋಸ್ಟರ್ ಅನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ ಕುಮಾರ್ ರೈ ಮತ್ತು ಸುಮಾ ಅಶೋಕ್ ರೈಯವರು ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ನಿರ್ಮಾಪಕರಾದ ಡಾ.ಹರ್ಷ ಕುಮಾರ ರೈ ಮಾಡಾವು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ರೈ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೇಶ್ ಶೆಟ್ಟಿ, ಸದಾಶಿವ ರೈ ಮಠ೦ತಬೆಟ್ಟು, ದೇವಸ್ಥಾನದ ವ್ಯವಸ್ಥಾಪಕ ಸಂತೋಷ್ ಕುಮಾರ್ ರೈ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಅ.2 ರಂದು ಇರ್ದೆಯಲ್ಲಿ ನಡೆಯುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಅನು ಆಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಭಕ್ತಿಗೀತೆ ಬಿಡುಗಡೆಗೊಳ್ಳಲಿದ್ದು ಚರಣ್ ಉಪ್ಪಳಿಗೆ ಸಾರಥ್ಯ ಶೆಟ್ಟಿ ಅಜಯ್‌ರಾಜ್ ಸಾಹಿತ್ಯದಲ್ಲಿ ಮೂಡಿಬಂದಿರುವ ಭಕ್ತಿಗೀತೆಗೆ ಭರತ್ ಗಟ್ಟಿ ಹಿನ್ನೆಲೆ ಗಾಯಕರಾಗಿ ಧ್ವನಿನೀಡಿದ್ದು ಎಸ್.ಡಿ.ಎಸ್ ಮಿಕ್ಸಿಂಗ್ ಆಂಡ್ ಮಾಸ್ಟರಿಂಗ್ ಸಮೀರ್ ಮುಡಿಪು, ನಿಶಾಂತ್ ಬನ್ನೂರುರವರು ಛಾಯಾಗ್ರಹಣವಿದೆ.

LEAVE A REPLY

Please enter your comment!
Please enter your name here