ಕಾಣಿಯೂರು: ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ಜ.31ರಂದು ಕಾಣಿಯೂರಿನಲ್ಲಿ ನಡೆಯಲಿರುವ 5ನೇ ವರ್ಷದ ಅಂತರ್ ಜಿಲ್ಲಾ ಮಟ್ಟದ ಯು-21 ವಯೋಮಿತಿಯ ಪುರುಷರ ಮತ್ತು ಮಹಿಳೆಯರ ಮ್ಯಾಟ್ ಕಬಡ್ಡಿ ಪಂದ್ಯಾಟ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೋಸ್ಟರ್ ಅನಾವರಣವು ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರದಲ್ಲಿ ನ.16ರಂದು ನಡೆಯಿತು.
ಕಾಣಿಯೂರು ಶ್ರೀ ರಾಮತೀರ್ಥ ಮಠದ ವ್ಯವಸ್ಥಾಪಕ ಶ್ರೀನಿಧಿ ಆಚಾರ್. ಕಲ್ಟಡ ಶ್ರೀ ಉಳ್ಳಾಕುಲು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶಿವರಾಮ ಉಪಾಧ್ಯಾಯ ಕಲ್ಪಡ, ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾಣಿಯೂರು ಶ್ರೀದುರ್ಗಾ ಆಸ್ಪತ್ರೆಯ ಡಾ.ಶಶಿಧರ್ ಪೆರುವಾಜೆ, ಕಾಣಿಯೂರು ಸ.ಹಿ.ಪ್ರಾ.ಶಾಲೆಯ ಮುಖ್ಯಗುರು ಬಾಲಕೃಷ್ಣ ಕೆ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಉಪಾಧ್ಯಕ್ಷೆ ಚಿತ್ರಾ, ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಠಲ ಗೌಡ ಅಗಳಿ, ಹರಿಣಾಕ್ಷಿ ಬನಾರಿ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮೀಜೆ, ಕಾಯಿಮಣ ಕೃಷ್ಣಾಪುರ ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ್ ಮುಂಡಾಳ, ಕಲ್ಪಡ ಕೊಡಿಯಾಲ ಸ್ನೇಹಿತರ ಬಳಗದ ಅಧ್ಯಕ್ಷ ಸುರೇಶ್ ಗುತ್ತು, ಮಾಜಿ ಅಧ್ಯಕ್ಷ ಯುವರಾಜ್ ಕಲ್ಪಡ, ಕೃಷ್ಣ ಚೆಟ್ಟಿಯಾರ್ ಕಾಣಿಯೂರು, ಸುಧಾಕರ್ ಕಾಣಿಯೂರು, ಶ್ರೀಧರ್ ಬನಾರಿ, ಆನಂದ ಭಂಡಾರಿ ಅಬ್ಬಡ, ಪ್ರವೀಣ್ ಪೆರ್ಲೋಡಿ, ದಿನೇಶ್ ಕಾನಾವು, ಮೋಹನ್ ಕಂಡೂರು, ಟ್ರಸ್ಟ್ ನ ಉಪಾಧ್ಯಕ್ಷ ಅಶ್ವಿನ್ ನಟ್ಟಿಹಿತ್ಲು ಹಾಗೂ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ.ಎಂ.ಕಲ್ಪಡ ಸ್ವಾಗತಿಸಿ, ಗಣೇಶ್ ಪೆರ್ಲೋಡಿ ವಂದಿಸಿದರು.
ಕಲ್ಪಡ ಕೊಡಿಯಾಲ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ವತಿಯಿಂದ ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬರುತ್ತಿದ್ದು, ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಜ 31ರಂದು ನಡೆಯಲಿರುವ 5ನೇ ವರ್ಷದ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಕಾಣಿಯೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಹಲವಾರು ಸಾಧಕರಿಗೆ ಸನ್ಮಾನ, ಅಭಿನಂದನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ.
ಸುಬ್ರಹ್ಮಣ್ಯ ಕೆ.ಎಂ.ಕಲ್ಪಡ, ಅಧ್ಯಕ್ಷರು, ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕಲ್ಪಡ, ಕೊಡಿಯಾಲ
