ಪುತ್ತೂರು: ಕೊಡಿಪ್ಪಾಡಿ ಗ್ರಾಮವನ್ನು ಉಪ್ಪಿನಂಗಡಿ ಹೋಬಳಿಯಿಂದ ರದ್ದು ಮಾಡಿ ಪುತ್ತೂರು ಹೋಬಳಿಗೆ ಸೇರ್ಪಡೆ ಮಾಡಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಕೊಡಿಪ್ಪಾಡಿ ಗ್ರಾ.ಪಂ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು, ಹೋಬಳಿ ಬದಲಾವಣೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಪುತ್ತೂರು ಕೊಡಿಪ್ಪಾಡಿಗೆ ಹತ್ತಿರವಾಗಿದ್ದು,ಉಪ್ಪಿನಂಗಡಿ ದೂರದಲ್ಲಿದೆ. ಕಂದಾಯ ಕೆಲಸ ಕಾರ್ಯಗಳಿಗೆ ಉಪ್ಪಿನಂಗಡಿಗೆ ತೆರಳಬೇಕಾದ ಅನಿವಾರ್ಯತೆ ಇದೆ ಜನರ ಬೇಡಿಕೆಗೆ ತಕ್ಕಂತೆ ಪುತ್ತೂರನ್ನೇ ಹೋಬಳಿ ಕೇಂದ್ರವನ್ನಾಗಿ ಮಾಡಲಾಗುತ್ತದೆ. ಆರೋಗ್ಯ ಕೇಂದ್ರವೂ ಪಾಣಾಜೆ ಕೇಂದ್ರಿತವಾಗಿದ್ದು ಅದನ್ನೂ ಪುತ್ತೂರಿಗೆ ಬದಲಾಯಿಸಲಾಗುವುದು ಎಂದು ಹೇಳಿದರು.

ಇದು ಕೊಡಿಪ್ಪಾಡಿ ಗ್ರಾಮಸ್ಥರ ಬಹುವರ್ಷದ ಬೇಡಿಕೆಯಾಗಿದ್ದು ಶಾಸಕರು ಈಡೇರಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಸೋಮಪ್ಪ ಪೂಜಾರಿ, ಇ ಒ ನವೀನ್ ಭಂಡಾರಿ, ಗ್ರಾಪಂ ಉಪಾಧ್ಯಕ್ಷೆ ರೇಖಾ ಮತ್ತಿತರರು ಉಪಸ್ಥಿತರಿದ್ದರು.