ಪುತ್ತೂರು: ಉಪ್ಪಿನಂಗಡಿ ಮೂಲದ ವ್ಯಕ್ತಿಯೋರ್ವರು ದುಬೈಯಲ್ಲಿ ನಿಧನರಾದ ಬಗ್ಗೆ ವರದಿಯಾಗಿದೆ.
ಉಪ್ಪಿನಂಗಡಿ ಸಮೀಪದ ಬಜತ್ತೂರು ಅರ್ಬಿ ನಿವಾಸಿ ತಿಲಕಾನಂದ ಪೂಜಾರಿ (ಪ್ರಶಾಂತ್) (33.ವ) ಮೃತಪಟ್ಟವರು.
ತಿಲಕಾನಂದ ಪೂಜಾರಿ ಅವರು ಇತ್ತೀಚೆಗೆ ದುಬೈನಲ್ಲಿ ನಿಧನರಾಗಿದ್ದರು. ದುಬೈನ ಆಸ್ಪತ್ರೆಯೊಂದರ ಶವಾಗಾರದಲ್ಲಿ ಇಡಲಾಗಿದ್ದ ಅವರ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲು ಕಾನೂನಿನ ತೊಡಕುಂಟಾಗಿತ್ತು. ಈ ವೇಳೆ ಕೆಸಿಎಫ್ ಯುಎಇ ಮುಖಂಡ ಉಚ್ಚಿಲ ಮೂಲದ ಸಮದ್ ಬಿರಾಲಿ ಹಾಗೂ ಅವರ ತಂಡ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ದುಬೈ ಪೊಲೀಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ, ಶುಕ್ರವಾರ ಮೃತದೇಹವನ್ನು ಮಂಗಳೂರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು(ಸೆ.27) ಅವರ ಅಂತ್ಯಕ್ರಿಯೆ ಹುಟ್ಟೂರಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಮೃತರು ತಂದೆ ಗೋಪಾಲ, ತಾಯಿ ಕಮಲ, ಅಣ್ಣ ಜಯಂತ, ಅಕ್ಕ ಸವಿತಾ ಅವರನ್ನು ಅಗಲಿದ್ದಾರೆ.