ಬಡಗನ್ನೂರು : ಬಡಗನ್ನೂರು ಗ್ರಾ. ಪಂ ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಶಿಬಿರ ಸೆ. 29 ರಂದು ಬೆಳಿಗ್ಗೆ 8ರಿಂದ ನಡೆಯಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾ. ಪಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸದ್ರಿ ಸಮೀಕ್ಷೆಯಲ್ಲಿ ಭಾಗವಹಿಸುವವರು UHID ಯು. ಹೆಚ್. ಐ. ಡಿ ಸಂಖ್ಯೆ( ಮೆಸ್ಕಾಂ ಇಲಾಖೆಯಿಂದ ಈಗಾಗಲೇ ಅಂಟಿಸಿರುವ ಸ್ಟಿಕರ್ ನಲ್ಲಿ ಇದೆ) ರೇಷನ್ ಕಾರ್ಡ್, ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್,ವೋಟರ್ ಐಡಿ ಜೊತೆಗೆ ಓಟಿಪಿ ಬರುವಂತಹ ಮೊಬೈಲ್ ತೆಗೆದುಕೊಂಡು ಬರತಕ್ಕದ್ದು. ಎಂದು ತಿಳಿಸಲಾಗಿದೆ.