ಮಾನೆಚ್ಚಿಲ್ ಸೇವೆ, ಪ್ರಭಾವಳಿ, ಕಲ್ಲಿನ ದೀಪ, ಕಣ್ಣ ದೃಷ್ಟಿ ಅರ್ಪಣೆ
ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ಮನೆಯ ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೆ.28 ರಂದು ದೈವಗಳಿಗೆ ನವಕಲಶ, ತಂಬಿಲ ಸೇವೆ ಹಾಗೂ ಪಾಷಾಣಮೂರ್ತಿ ಸತ್ಯದೇವತೆ ಕಲ್ಲುರ್ಟಿ ದೈವಕ್ಕೆ ಮಾನೆಚ್ಚಿಲ್ ಸೇವೆ ಸೇವೆ ನಡೆಯಿತು.

ಪಂಜುರ್ಲಿ ದೈವಕ್ಕೆ ಪ್ರಭಾವಳಿ, ಕಲ್ಲುರ್ಟಿ ದೈವಕ್ಕೆ ಕಲ್ಲಿನದೀಪ, ಗುಳಿಗ ದೈವಕ್ಕೆ ಕಣ್ಣ ದೃಷ್ಟಿ ಅರ್ಪಣೆ ಜರುಗಿತು. ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ, ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ಉಪಸ್ಥಿತಿಯಲ್ಲಿ, ನವಕಲಶ ಸೇವೆ ಹಾಗೂ ಇನ್ನಿತರ ಸೇವಾ ಕಾರ್ಯಗಳು ನಡೆಯಿತು. ಅನೇಕ ಮಂದಿ ಊರಿನ ಭಕ್ತಾಧಿಗಳು ಅನ್ನಸಂತರ್ಪಣೆಯಲ್ಲಿ ಹಾಗೂ ದೇವತಾ ಕಾರ್ಯದಲ್ಲಿ ಪಾಲ್ಗೊಂಡರು.