ಪುತ್ತೂರು: ಕಬಕ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸನ್ನಧಿಯಲ್ಲಿ ಡಿ. 28 ರಂದು ನಡೆಯಲಿರುವ 12ನೇ ವರ್ಷದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸೇವಾ ಸಮಿತಿ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು, ಉತ್ಸವ ಸಮಿತಿ ಗೌರಾವಾಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಪ್ರಧಾನ ಅರ್ಚಕರಾದ ಶ್ರೀಧರ ಭಟ್ ಕಬಕ, ಉಪಾಧ್ಯಕ್ಷರುಗಳಾದ ಗೋಪಾಲಕೃಷ್ಣ ರೈ, ಜಿನ್ನಪ್ಪ ಪೂಜಾರಿ ಮುರ, ಜನಾರ್ಧನ ಪ್ರಕಾಶ್ ವಡ್ಯ, ಕೋಶಾಧಿಕಾರಿಗಳಾದ ರಮೇಶ್ ಆಚಾರ್ಯ, ಜತೆ ಕಾರ್ಯದರ್ಶಿಗಳಾದ ರವೀಂದ್ರ ಮೇಲಾಂಟ ಕಲ್ಲಂದಡ್ಕ, ಸದಸ್ಯರುಗಳಾದ ದಿನೇಶ್ ಪಿ. ನಾಗೇಶ್ ಪಿ, ಜಯರಾಮ ನೆಕ್ಕರೆ, ಜೇರ ಮಲರಾಯ ದೈವಸ್ಥಾನ ಕಾರ್ಯಾಧ್ಯಕ್ಷರಾದ ವಸಂತಕುಮಾರ್ ಅಮೈ ಅಧ್ಯಕ್ಷರಾದ ಸತೀಶ್ ರೈ, ಸಂಘಟನಾ ಕಾರ್ಯದರ್ಶಿಯಾದ ಕಾರ್ತಿಕ್ ಶೆಟ್ಟಿ ಮೂಡಾಯಿಮಾರು, ಬಾಬು ಗೌಡ ನೆಕ್ಕರೆ, ಸಹಾಯಕ ಅರ್ಚಕರಾದ ರಾಮಚಂದ್ರ ಭಟ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
