ಪುತ್ತೂರು: ಪುತ್ತೂರಿನ ಹೊಟೇಲ್ ಉದ್ಯಮದಲ್ಲಿ ಹಿರಿಯರಾದ ಬೊಳುವಾರಿನ ನವದುರ್ಗಾ ಹೊಟೇಲ್ ಮಾಲಕ ಪದ್ಮನಾಭ ಮಲ್ಯ (80ವ) ರವರು ಸೆ.29 ರಂದು ಸ್ವಗೃಹದಲ್ಲಿ ನಿಧನರಾದರು.
ಸುಮಾರು 45 ವರ್ಷಗಳಿಂದ ಪುತ್ತೂರಿನ ಬೊಳುವಾರಿನಲ್ಲಿ ನವದುರ್ಗಾ ಹೊಟೇಲ್ ನಡೆಸುತ್ತಿದ್ದರು. ವಯೋಸಹಜ ಅವರು ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಭಾರತಿ ಮಲ್ಯ, ಪುತ್ರರಾದ ದೇವಿಪ್ರಸಾದ್ ಮಲ್ಯ, ಕಿರಣ್ ಶಂಕರ್ ಮಲ್ಯ, ರಾಘವೇಂದ್ರ ಮಲ್ಯ, ಸೊಸೆಯಂದಿರಾದ ದಿವ್ಯಶ್ರೀ ಮಲ್ಯ, ಧನ್ಯಶ್ರೀ ಮಲ್ಯ ಅವರನ್ನು ಅಗಲಿದ್ದಾರೆ.
ಇಂದು ಸಂಜೆ ಅಂತ್ಯ ಸಂಸ್ಕಾರ:
ಮೃತರ ಅಂತ್ಯ ಸಂಸ್ಕಾರ ಸೆ.29 ರ ಸಂಜೆ ಗಂಟೆ 4 ಕ್ಕೆ ಪುತ್ತೂರು ಮಡಿವಾಳಕಟ್ಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಪುತ್ರ ಕಿರಣ್ ಶಂಕರ್ ಮಲ್ಯ ತಿಳಿಸಿದ್ದಾರೆ.