ಪುತ್ತೂರು: ಬೈಪಾಸ್ ಹೆದ್ದಾರಿಯ ತೆಂಕಿಲ ವಿವೇಕಾನಂದ ಶಾಲೆಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಪುಷ್ಪಾ ಸ್ಕ್ವೇರ್ ಕಟ್ಟಡ ಅ.2 ರಂದು ಸಂಜೆ 6 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಪ್ರಗತಿಪರ ಕೃಷಿಕರೂ ಆಗಿರುವ ಕಟ್ಟಡ ಮಾಲಕರ ತಂದೆ ಸುಬ್ರಾಯ ನಾೖಕ್ ಕೊಳಕೆಮಾರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಮಂಗಳೂರಿನ ಶಕ್ತಿ ಸಮೂಹ ಸಂಸ್ಥೆಯ ಡಾ.ಕೆ.ಸಿ. ನಾೖಕ್ ಅವರು ಉದ್ಘಾಟಿಸಲಿದ್ದಾರೆ.
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಎಂಎಲ್ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ನಗರಸಭೆ ಅಧ್ಯಕ್ಷ ಲೀಲಾವತಿ ಅಣ್ಣು ನಾಯ್ಕ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ಗ್ರಾಮಾಮಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ದ್ವಾರಕ ಕಾರ್ಪೋರೇಶನ್ನ ಗೋಪಾಲಕೃಷ್ಣ ಭಟ್, ಸಚಿನ್ ಟ್ರೇಡಿಂಗ್ನ ಮಂಜುನಾಥ ನಾಯಕ್ ಕಲ್ಲಾರೆ, ಯುಆರ್ ಪ್ರಾಪರ್ಟಿಸ್ನ ಉಜ್ವಲ್ ಪ್ರಭು, ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ ರೈ ಬಳಜ್ಜ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಳಿಯ ಜ್ಯುವೆಲ್ಲರ್ಸ್ನ ಮುಳಿಯ ಕೇಶವ ಭಟ್, ಎಸ್ಡಿಪಿ ರೆಮಿಡೀಸ್ನ ಡಾ.ಹರಿಕೃಷ್ಣ ಪಾಣಾಜೆ, ಸಾಮೆತ್ತಡ್ಕ ಸಿಝ್ಲರ್ ಗ್ರೂಪ್ಸ್ನ ಪ್ರಸನ್ನ ಕುಮಾರ್ ಶೆಟ್ಟಿ, ತುಳಸಿ ಕ್ಯಾಟರ್ಸ್ನ ಹರೀಶ್ ರಾವ್ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್ ರಾಜ್ ಅವರು ಗೌರವ ಉಪಸ್ಥಿತರಿರಲಿದ್ದಾರೆ ಎಂದು ಪಾಲುದಾರರಾದ ಅಭಿಜಿತ್ ಕೊಳಕೆಮಾರ್, ಅಭಿಷೇಕ್ ಕೊಳಕೆಮಾರ್, ಅಭೀಷ್ ಕೊಳಕೆಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಈ ಪುಷ್ಪಾ ಸ್ಕ್ವೇರ್ ವಾಣಿಜ್ಯ ಸಂರ್ಕೀಣವು 8 ಸಾವಿರ ಸ್ಕ್ವಾರ್ ಫೀಟ್ ವಿಸ್ತೀರ್ಣ ಹೊಂದಿದೆ. ಅಂಡರ್ಗ್ರೌಂಡ್, ಗ್ರೌಂಡ್ಫ್ಲೋರ್, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಹೊಂದಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದು, ಏಕಕಾಲದಲ್ಲಿ 25 ವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ.