ವಿಟ್ಲ ಶ್ರೀ ಮಂಜುನಾಥೇಶ್ವರ  ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನಲ್ಲಿ ಉಳಿತಾಯ ಯೋಜನೆಯ ಕೊನೆಯ ಡ್ರಾ

0

ವಿಟ್ಲ: ಇಲ್ಲಿನ ಶ್ರೀ ಮಂಜುನಾಥೇಶ್ವರ  ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಇದರ ಉಳಿತಾಯ ಯೋಜನೆಯ ಕೊನೆಯ 40 ನೇ ಡ್ರಾ ಇತ್ತೀಚೆಗೆ ನಡೆಯಿತು.ಬಂಪರ್ ಬಹುಮಾನ ವಿಜೇತರ ಆಯ್ಕೆಯ‌ನ್ನು  ಹನುಮಾನ್ ಪ್ರಿಂಟರ್ಸ್ ನ ಮಾಲಕರಾದ  ವೆಂಕಟೇಶ್ ಭಟ್ ನೆರವೇರಿಸಿದರು. 

ವಿಟ್ಲ ನಿವಾಸಿ ಹರೀಶ್ ಮೊಯಿಲಿರವರ ಪುತ್ರಿ ನಿಧಿಷ ಬಂಪರ್ ಬಹುಮಾನ ಆ್ಯಕ್ಟಿವಾ ದ್ವಿಚಕ್ರ ವಾಹನ ವಿಜೇತರಾದರು. ಈ ಸಂದರ್ಭದಲ್ಲಿ ಡ್ರಾ ಮೂಲಕ ಸದಸ್ಯರಿಗೆ 10 ಆಕರ್ಷಕ ಬಹುಮಾನ ಹಾಗೂ ಸ್ಥಳದಲ್ಲಿ ಉಪಸ್ಥಿತರಿದ್ದ ನಾಲ್ವರು ಸದಸ್ಯರಿಗೆ  ಡ್ರಾ ಮೂಲಕ ಸರ್ ಪ್ರೈಸ್ ಗಿಫ್ಟ್  ನೀಡಲಾಯಿತು.

ಈ ಸಂದರ್ಭದಲ್ಲಿ   ಉದ್ಯಮಿ ಶ್ರೀಧರ್ ಪೈ,  ವಿಟ್ಲ ಮೆಸ್ಕಾಂ ನ ಸಿಬ್ಬಂದಿ ಮ್ಯಾಕ್ಸಿಮ್ ವಿಟ್ಲ, ವಿಟ್ಲ ದಲಿತ್ ಸೇವಾ ಸೇವಾ ಸಮಿತಿ  ಸ್ಥಾಪಕಾಧ್ಯಕ್ಷರಾದ ಸೇಸಪ್ಪ ಬೆದ್ರಕಾಡು,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಹೆಚ್.   ಮಾಜಿ ಅಧ್ಯಕ್ಷೆ ಚಂದ್ರ ಕಾಂತಿ ಶೆಟ್ಟಿ,  ಪ್ರಮುಖರಾದ ಮನೋಹರ್ ಭಟ್,  ಶಿಕ್ಷಕಿ ವಿಜಯಲಕ್ಷ್ಮಿ, ವಿಟ್ಲದ ಪವಿ ಸ್ಟುಡಿಯೋಸ್ ನ ಮಾಲಕರಾದ ಪ್ರವೀಣ್ ವಿಟ್ಲ,  ಪುತ್ತೂರಿನ ಜೆ. ಆರ್. ಎಂಟರ್ಪ್ರೈಸಸ್ ನ ಮಾಲಕರಾದ ಜಯರಾಜ್ ಪೂಜಾರಿ, ಸಂಸ್ಥೆ ಯ ಮಾಲಕರ ಪತ್ನಿ ರಶ್ಮಿ ಮಂಜುನಾಥ್ ., ಪುತ್ರ ಶ್ರೀಶಾಸ್ತಾ, ಪುತ್ರಿ ಶ್ರೀದೇವಿ, ಸಂಸ್ಥೆಯ ಸಿಬ್ಬಂದಿಗಳಾದ ಶರತ್, ದಿವಾಕರ್,  ವಿಘ್ನೇಶ್, ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ   ಮಂಜುನಾಥ್ ಎಸ್. ಸ್ವಾಗತಿಸಿದರು. ಹರೀಶ್ ನೀರಕೋಡಿ ಕುಂಡಡ್ಕ ಕಾರ್ಯಕ್ರಮ  ನಿರೂಪಿಸಿದರು.

LEAVE A REPLY

Please enter your comment!
Please enter your name here