ಕುಂಬ್ರ ದಯಾಕರ ಆಳ್ವರಿಗೆ ಮಾತೃವಿಯೋಗ

0

 ಪುತ್ತೂರು :   ದಿ. ಬೋಳೋಡಿ ಸೀತಾರಾಮ ಆಳ್ವರವರ ಪತ್ನಿ ಕುಂಬ್ರ ಲಲಿತಾ ಎಸ್ ಆಳ್ವ( 93 ವ) ರವರು ಅ. 3 ರಂದು ಬೆಳಿಗ್ಗೆ  ತಮ್ಮ ಸೃಗೃಹ ಪೆರುವಾಜೆ ಆಳ್ವಾ ಫಾರ್ಮ್ ನಲ್ಲಿ ನಿಧನರಾದರು. 

ಮೃತರು  ಪುತ್ರರಾದ ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಒಪರೇಟಿವ್ ‌ಸೊಸೈಟಿ ನಿರ್ದೇಶಕ  ಕುಂಬ್ರ ದಯಾಕರ ಆಳ್ವ, ಉದ್ಯಮಿ ಕುಂಬ್ರ  ದಿವಾಕರ್ ಆಳ್ವ,   ಪುತ್ರಿ ಚಿತ್ರಾಲೇಖಾ ಅಡಪ,  ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ‌ ಅಂತ್ಯ ಸಂಸ್ಕಾರ ಅ. 3 ರಂದು ಮಧ್ಯಾಹ್ನ 12.30 ಕ್ಕೆ ಪೆರುವಾಜೆ ಆಳ್ವಾಫಾರ್ಮ್ಸ್ ನಲ್ಲಿ ನಡೆಯಲಿದೆ ಎಂದು ಕುಂಬ್ರ ದಯಾಕರ ಆಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here