ಪುತ್ತೂರು: ಅವನೀಶ್ ಸಿ ಮಾಲಕತ್ವದ ಎಲೈಡ್ ಹೆಲ್ತ್ ಕೇರ್ ಪ್ರೊಫೆಷನಲ್ ಪೆಲ್ಯುಯೇಟ್ವಿ ಹೋಂ ಕೇರ್ ಸರ್ವಿಸ್ ಅ. 2ರಂದು ಪುತ್ತೂರಿನ ಭೂಬ್ಯಾಂಕ್ ಕಟ್ಟಡದ ರೈತ ಸೌಧ ಸಂಕೀರ್ಣದ ನೆಲಮಹಡಿಯಲ್ಲಿ ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕರಾದ ಅವನೀಶ್ ಅತಿಥಿಗಳನ್ನು ಬರಮಾಡಿಕೊಂಡರು. ಶ್ರೀಮತಿ ಪೂವಕ್ಕ ಚಿಕ್ಕಪುತ್ತೂರು ರಿಬ್ಬನ್ ಬಿಚ್ಚುವುದರೊಂದಿಗೆ, ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಅವನೀಶ್ ನ ತಂದೆ ಚಂದ್ರು ಚಿಕ್ಕಪುತ್ತೂರು, ತಾಯಿ ಚಂದ್ರಾವತಿ, ಪುತ್ತೂರು ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಯುವರಾಜ್ ಪೆರಿಯತ್ತೋಡಿ, ಮ್ಯಾನೇಜರ್ ಸುಮನ ಎಂ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಇಂದು ಶೇಖರ್ ಚಿಕ್ಕಪುತ್ತೂರು, ದೇವಣ್ಣ ನಾಯ್ಕ್ ಪಿ, ಶ್ರೀಧರ್ ಪಿ, ಸೀತಾರಾಮ ಚಿಕ್ಕಪುತ್ತೂರು, ರಂಜಿನಿ ನಗರ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.