ಕಾಣಿಯೂರು: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ , ಶಾಂತಿವನ ಟ್ರಸ್ಟ್ (ರಿ ) ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ವತಿಯಿಂದ ನಡೆದ ‘ಜ್ಞಾನ ರಥ’ ಮತ್ತು ‘ಜ್ಞಾನ ಪಥ’ ಪುಸ್ತಕಗಳ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಧನುಷ್ ಕೆ (7ನೇ) ದ್ವಿತೀಯ. ಇವರು ಕಡಬ ತಾಲೂಕು ಚಾರ್ವಾಕ ಗ್ರಾಮದ ಕಾಸ್ಪಾಡಿ ಸತ್ಯನಾರಾಯಣ ಕಲ್ಲೂರಾಯ ಮತ್ತು ಕಲ್ಪನ ದಂಪತಿಗಳ ಸುಪುತ್ರ, ಪ್ರಬಂಧ ಸ್ಪರ್ಧೆಯಲ್ಲಿ ವನ್ಶಿ ಕೆ ಎಂ (7ನೇ) ತೃತೀಯ. ಇವರು ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಬೀರ ಮನೋಹರ ಕೆ ಮತ್ತು ಚೇತನಾ ಕೆ ದಂಪತಿಗಳ ಸುಪುತ್ರಿ. ಈ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ಶಿಕ್ಷಕಿ ಜಯಶೀಲ ಕೆ ಮಾರ್ಗದರ್ಶನ ನೀಡಿರುತ್ತಾರೆ.
ಇವರನ್ನು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಸಹ ಆಡಳಿತ ಅಧಿಕಾರಿ ಹೇಮನಾಗೇಶ್ ರೈ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಿವಿಶ್ ಮುರುಳ್ಯ, ಮುಖ್ಯಗುರುಗಳಾದ ನಾರಾಯಣ ಭಟ್, ವಿನಯ ವಿ ಶೆಟ್ಟಿ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.
