ಗ್ರಾಹಕರಿಗೆ ಲಭಿಸಲಿದೆ ಭರಪೂರ ಕೊಡುಗೆ
ಪುತ್ತೂರು: ಇಲ್ಲಿನ ಕೆಎಸ್ಆರ್ಟಿಸಿ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನದ ಮಳಿಗೆ ಜೋಸ್ ಆಲುಕ್ಕಾಸ್ ಪುತ್ತೂರಿನಲ್ಲಿ ಏಳು ವರುಷವನ್ನು ಪೂರೈಸಿ ಎಂಟನೇ ವರುಷಕ್ಕೆ ಪಾದಾರ್ಪಣೆ ಗೈಯ್ಯುತ್ತಿರುವ ಹಿನ್ನೆಲೆಯಲ್ಲಿ ಶೋರೂಂ ಅನ್ನು ಮತ್ತಷ್ಟು ಸುಂದರವಾಗಿ ವಿನ್ಯಾಸ ಗೊಳಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭ ಅ.4ರಂದು ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಕೇರಳದ ಪ್ರಸಿದ್ಧ ಚಿನ್ನದ ಮಳಿಗೆ ಅಂತರಾಷ್ಟ್ರೀಯ ಖ್ಯಾತಿ ಹೊಂದಿರುವ ಜೋಸ್ ಆಲುಕ್ಕಾಸ್ ಸಂಸ್ಥೆ ಏಳು ವರುಷಗಳ ಹಿಂದೆ ತನ್ನ ಮಳಿಗೆಯನ್ನು ಪುತ್ತೂರಿನಲ್ಲಿ ತೆರೆದುಕೊಂಡಿತು. ಗುಣಮಟ್ಟ ಹಾಗೂ ಪಾರದರ್ಶಕ ವ್ಯವಹಾರದಿಂದ ಅತೀ ಕಡಿಮೆ ಅವಽಯಲ್ಲೇ ಸಂಸ್ಥೆ ಈ ಭಾಗದ ಜನರ ಮನಗೆಲ್ಲುವಲ್ಲಿ ಸಫಲವಾಯಿತು.
ಜೋಸ್ ಆಲುಕ್ಕಾಸ್ ಸನ್ಸ್ ಜ್ಯುವೆಲ್ಲರಿ ಗ್ರೂಪ್ನ ಚೇರ್ಮೆನ್ ಜೋಸ್ ಆಲುಕ್ಕಾರವರು ಈ ಸಂಸ್ಥೆಯ ಸ್ಥಾಪಕರಾಗಿದ್ದಾರೆ. 1964 ರಲ್ಲಿ ಇವರ ತಂದೆ ಆಲುಕ್ಕಾ ವರ್ಗೀಸ್ರವರು ತ್ರಿಶೂರ್ನಲ್ಲಿ ಚಿನ್ನದ ಉದ್ದಿಮೆ ಆರಂಭಿಸಿದ್ದರು. ಬಳಿಕ ಜೋಸ್ ಆಲುಕ್ಕಾರವರ ಮುಂದಾಲೋಚನೆ ಮತ್ತು ದೃಢಸಂಕಲ್ಪದ ಕಾರ್ಯ ಸಾಂಸ್ಥಿಕ ರೂಪ ತಾಳಿ ಇಂದು ಪ್ರಪಂಚದಲ್ಲಿ ಒಂದು ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಲು ದಾರಿಮಾಡಿಕೊಟ್ಟಿತು. ಆರಂಭದಲ್ಲಿ ಕೇರಳದ ವಿವಿಧ ನಗರಗಳಲ್ಲಿ ತಮ್ಮ ಮಳಿಗೆ ಆರಂಭಿಸಿದ ಸಂಸ್ಥೆ ಇಂದು ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ ಮತ್ತು ತೆಲಂಗಾಣ ರಾಜ್ಯಗಳಲ್ಲಿ ೬೩ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಕರ್ನಾಟಕದ ಬೆಂಗಳೂರಿನಲ್ಲಿ 9, ಮಂಗಳೂರಿನಲ್ಲಿ 2, ಉಡುಪಿ, ಮೈಸೂರು, ಬೆಳಗಾವಿ ಹಾಗೂ ಪುತ್ತೂರಿನಲ್ಲಿ ತಲಾ ಒಂದೊಂದು ಮಳಿಗೆಗಳನ್ನು ಹೊಂದಿದ್ದು, ಪುತ್ತೂರಿನ ಮಳಿಗೆ ಕರ್ನಾಟಕದಲ್ಲಿ ಇವರ 8ನೇ ಮಳಿಗೆಯಾಗಿದೆ. ಪುತ್ತೂರಿನ ಮಳಿಗೆ 3000 ಚದರ ಅಡಿ ವಿಸ್ತೀರ್ಣತೆಯಲ್ಲಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಈಗಿನ ಕಾಲಘಟ್ಟಕ್ಕೆ ತಕ್ಕುದಾದ ಶಾಪಿಂಗ್ ಅನುಭವವನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ರಿಯೊವೇಶನ್ ಕೆಲಸಗಳನ್ನು ಪೂರ್ತಿಗೊಳಿಸಲಾಗಿದ್ದು, ಅದ್ದೂರಿ ಉದ್ಘಾಟನೆಗೆ ಸಜ್ಜಾಗಿದೆ. ಇಲ್ಲಿ ಚಿನ್ನ, ಬೆಳ್ಳಿ, ವಜ್ರ ಮತ್ತು ಪ್ಲಾಟಿನಂ ಆಭರಣಗಳಿಗೆ ಪ್ರತ್ಯೇಕ ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ. ಗುಣಮಟ್ಟ ಮತ್ತು ಶುದ್ಧತೆಗೆ ಬದ್ಧರಾಗಿರುವುದರಿಂದ ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿ ಚಿನ್ನದ ಖರೀದಿಯಲ್ಲಿ ಮನೆಮಾತಾಗಿದೆ. ಪ್ರತೀ ಶೋ ರೂಂನಲ್ಲಿರುವ ಪ್ರತಿಯೊಂದು ಆಭರಣವನ್ನು ಶುದ್ಧ ೨೨-ಕ್ಯಾರೆಟ್ ಚಿನ್ನದಿಂದ ವಿನ್ಯಾಸ ಮಾಡಿದ್ದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಚಿನ್ನದ ಉಳಿತಾಯ ಯೋಜನೆಯೂ ಲಭ್ಯವಿದೆ. ಕೆಎಸ್ಆರ್ಟಿಸಿ ವಾಣಿಜ್ಯ ಮಳಿಗೆಯ ನೆಲ ಅಂತಸ್ತಿನಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆಯೂ ಲಭ್ಯವಿದೆ.
ಜೋಸ್ ಅಲುಕ್ಕಾಸ್ನ ಪ್ರತಿಯೊಂದು ಶೋ ರೂಂಗಳಲ್ಲಿನ ಆಭರಣಗಳನ್ನು 22 ಕ್ಯಾರೆಟ್ ಶುದ್ಧ ಚಿನ್ನದಿಂದ ತಯಾರಿಸಲಾಗಿದ್ದು ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮನಾಗಿರುತ್ತದೆ. ISO 9001:2000 ಕಂಪನಿಯಾದ ಜೋಸ್ ಅಲುಕ್ಕಾಸ್ ಸರ್ಕಾರಿ ಪ್ರಮಾಣೀಕೃತ BIS ಹಾಲ್ಮಾರ್ಕ್ ಚಿನ್ನದ ಆಭರಣಗಳನ್ನು ಮಾತ್ರ ಪ್ರದರ್ಶಿಸುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ವಜ್ರಗಳ ವಿಷಯಕ್ಕೆ ಬಂದರೆ, ಉತ್ತಮ ಕೈಯಿಂದ ಆರಿಸಿದ ಅಂತರರಾಷ್ಟ್ರೀಯ ಪ್ರಯೋಗಾಲಯ ಪ್ರಮಾಣೀಕೃತ ವಜ್ರಗಳು ಮಾತ್ರ ನಮ್ಮ ಅಂಗಡಿಗಳಿಗೆ ಬರುತ್ತವೆ.
ಉದ್ಘಾಟನಾ ಸ್ಪೆಷಲ್ ಆಫರ್..
* ರೂ. 75,೦೦೦ ಬೆಲೆಯ ಖರೀದಿಗೆ ಚಿನ್ನದ ನಾಣ್ಯ ಉಡುಗೊರೆ
*ವಜ್ರ ಖರೀದಿಯಲ್ಲಿ ಶೇ.25 ರಿಯಾಯಿತಿ
*ಪ್ಲಾಟಿನಂ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ 15% ರಿಯಾಯಿತಿ
*ಹಳೆಯ ಚಿನ್ನದ ಒಡವೆಗಳಿಗೆ ವಿಶೇಷ ವಿನಿಮಯ ಆಫರ್
*ಎಲ್ಲಾ ಖರೀದಿಗಳಿಗೆ ವಿಶೇಷ ಉಡುಗೊರೆಗಳು
*ಮದುವೆ ಆಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ
ಜೋಸ್ ಆಲುಕ್ಕಾಸ್ ಯಾವುದರಲ್ಲಿ ಪ್ರಸಿದ್ಧಿ ?
ಜೋಸ್ ಆಲುಕ್ಕಾಸ್ ಸಂಸ್ಥೆಯು ತನ್ನದೇ ಆದ ವಿಶೇಷತೆ ಮತ್ತು ವಿಭಿನ್ನತೆಯನ್ನು ಗುರುತಿಸಿಕೊಂಡಿದೆ. ವಿವಿಧ ವಿನ್ಯಾಸ, ಉಪಯೋಗಗಳಿಂದ ಚಿನ್ನಾಭರಣಗಳನ್ನು ವರ್ಗೀಕರಿಸಿ ಗ್ರಾಹಕರಿಗೆ ಮನಕ್ಕೊಪ್ಪುವ ರೀತಿಯ ಶ್ರೇಣಿಯಲ್ಲಿ ಒದಗಿಸುತ್ತಿದೆ.
* ಮದುವೆ ಆಭರಣ ಸಂಗ್ರಹ ’ಶುಭ ಮಾಂಗಲ್ಯಂ’
* ಸಾಂಪ್ರದಾಯಿಕ ದೇವಸ್ಥಾನ ಆಭರಣ ’ಪರಂಪರಾ’
* ಸೊಗಸಾದ ವಜ್ರಗಳ ಸಂಗ್ರಹ ’ನಿತ್ಯಾರ’
* ಪುರಾತನ ಆಭರಣ ‘ಧಾರಾ’
* ರಾಜಮನೆತನದ ಆಭರಣ ಸಂಗ್ರಹ ‘ರಾಜಮುಖಿ’
* ಪೋಲ್ಕಿ ಕಲ್ಲಿನ ಆಭರಣ ‘ಚಕ್ರ’
* ವಧುವಿನ ವಜ್ರದ ಆಭರಣ ‘ವಿವಾಹ್’
* ಅನ್ಕಟ್ ವಜ್ರದ ಆಭರಣ ‘ಅನಂತ’
*ಅಮೂಲ್ಯ ಕಲ್ಲುಗಳ ಆಭರಣ ‘ಇಂದ್ರ’
* ಕ್ಲಾಸಿಕ್ ಚಿನ್ನದ ಆಭರಣ ಸಂಗ್ರಹ ‘ಮೆಹಫಿಲ್’