ಪುತ್ತೂರು: ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ಘಟಕದ 2025-2027ನೇ ಸಾಲಿನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಸುಳ್ಯ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿರುವ ಕಚೇರಿಯಲ್ಲಿ ಜರಗಿತು.

ಅಧ್ಯಕ್ಷರಾಗಿ ಅಡ್ವೋಕೇಟ್ ಪಿ.ಎಂ. ಮೂಸ ಕುಂಞ ಪೈಬoಚ್ಚಾಲ್, ಪ್ರದಾನ ಕಾರ್ಯದರ್ಶಿ ಹಸೈನಾರ್ ವಳಲoಬೆ, ಕೋಶಾಧಿಕಾರಿಯಾಗಿ ಶಾಫಿ ಕುತ್ತಾಮೊಟ್ಟೆ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ವೋಕೇಟ್, ಫಲಾಹ್ ನ
ಇಬ್ರಾಹಿಂ ಹಾಜಿ ಕತ್ತರ್, ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, ಹಂಝ ದುಗ್ಗಲಡ್ಕ,ಡಾ. ಮಹಮ್ಮದ್ ಕುಂಭಕ್ಕೋಡ್ ಮೊದಲಾದವರು ಉಪಸ್ಥಿತರಿದ್ದರು.