ಉತ್ತಮ ಸೇವೆ ನೀಡಿದಾಗ ಸಂಸ್ಥೆ ಬೆಳವಣಿಗೆ ಸಾಧ್ಯ: ಅಶೋಕ್ ಕುಮಾರ್ ರೈ
ಪುತ್ತೂರು: ಜೋಸ್ ಆಲುಕ್ಕಾಸ್ ಸಂಸ್ಥೆ ಕಳೆದ 8 ವರುಷದಿಂದ ಉತ್ತಮ ವ್ಯವಹಾರ ನಡೆಸುತ್ತಾ ಬರುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಸಂಸ್ಥೆ ಬೆಳವಣಿಗೆ ಸಾಧ್ಯ. ಜೋಸ್ ಆಲುಕ್ಕಾಸ್ ಕ್ವಾಲಿಟಿ ಮತ್ತು ಕ್ವಾಂಟಿಟಿ ಮೇಲೆ ಗ್ರಾಹಕರನ್ನು ಆಕರ್ಷಿಸುತ್ತಾ ಬಂದಿದೆ. ಲಾಭದ ಒಂದಂಶವನ್ನು ಶಾಲೆಗಳಿಗೆ ನೀಡುತ್ತಿರುವ ಇವರ ಕೆಲಸ ಅಭಿನಂದನೀಯ. ಸಮಾಜದಿಂದ ಸಮಾಜಕ್ಕೆ ಎನ್ನುವ ಪರಿಕಲ್ಪನೆ ಇಲ್ಲಿ ಸಾಕಾರವಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಅ.4ರಂದು ಪುತ್ತೂರಿನ ಕೆಎಸ್ಆರ್ಟಿಸಿ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನದ ಮಳಿಗೆ ಜೋಸ್ ಆಲುಕ್ಕಾಸ್ನ ನವೀಕೃತ ಶೋರೂಂ ಉದ್ಘಾಟಿಸಿ ಮಾತನಾಡಿದರು. ಈಗಿನ ಕಾಲ ಘಟ್ಟಕ್ಕೆ ತಕ್ಕುದಾದ ಉತ್ತಮ ಮಳಿಗೆ ಇಂದಿಲ್ಲಿ ನಿರ್ಮಾಣವಾಗಿದೆ. ದೊಡ್ಡ ಪೇಟೆ ಪಟ್ಟಣಗಳಲ್ಲಿ ಸಿಗುವ ಕಲೆಕ್ಷನ್ಗಳು ಇಲ್ಲಿ ಲಭ್ಯವಿರುವುದು ಗ್ರಾಹಕರಿಗೆ ಸಹಕಾರಿಯಾಗಿದೆ. ಇಂತಹ ಅಂತರಾಷ್ಟ್ರೀಯ ಮಟ್ಟದ ದೊಡ್ಡ – ದೊಡ್ಡ ಸಂಸ್ಥೆಗಳು ಪುತ್ತೂರಿಗೆ ಬಂದರೆ ಹಲವಾರು ಜನರಿಗೆ ಉದ್ಯೋಗ ಸಿಗುತ್ತದೆ. ಸಂಸ್ಥೆ ಇನ್ನಷ್ಟು ಬೆಳಗಲಿ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಮಾತನಾಡಿ ಮಹಾಲಿಂಗೇಶ್ವರನ ಮಣ್ಣಲ್ಲಿ ಯಾವುದೇ ವ್ಯಾಪಾರ ಮಾಡಿದರೂ ಅಭಿವೃದ್ದಿ ಆಗುತ್ತದೆ ಎನ್ನುವುದಕ್ಕೆ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯೇ ಪ್ರತ್ಯಕ್ಷ ಸಾಕ್ಷಿ. ಬಡವರು ಮತ್ತು ಶ್ರೀಮಂತರನ್ನು ಒಂದೇ ರೀತಿಯಲ್ಲಿ ಕಾಣುವ ಸಂಸ್ಥೆ ಇದಾಗಿದೆ. ಸ್ಕೀಮ್ ಮುಖಾಂತರ ಬಡವರಿಗೂ ಚಿನ್ನಾಭರಣ ಖರೀದಿಗೆ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಎಷ್ಟೇ ಸಂಘಟನೆಗಳಿದ್ದರೂ ಸಾಲದು. ದಾನ ಧರ್ಮ ಮಾಡಲು ಗಟ್ಟಿ ಮನಸ್ಸು ಹಾಗೂ ದೃಢ ನಿರ್ಧಾರ ಅಗತ್ಯ. ಸಿ.ಎಸ್.ಆರ್. ಫಂಡ್ ಮುಖಾಂತರ ಸರಕಾರಿ ಶಾಲೆಗಳನ್ನು ಮೇಲಕ್ಕೆತ್ತುವ ಕೆಲಸ ಮಾಡುತ್ತಿರುವುದು ಇತರರಿಗೆ ಮಾದರಿ. ಜಾತಿ ಮತ ಬೇಧ ಮರೆತು ಸರಕಾರಿ ಶಾಲೆಗಳಿಗೆ ಅನುದಾನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆ ಸಿ.ಎಸ್.ಆರ್ ಫಂಡ್ ಅನ್ನು ಸರಕಾರಿ ಶಾಲೆಗಳಿಗೆ ನೀಡುತ್ತಿದೆ. ಆದುದರಿಂದ ಮಕ್ಕಳು ಮತ್ತು ಪೋಷಕರು ಇಂತಹ ಸಂಸ್ಥೆಗೆ ಆಭಾರಿಯಾಗಿರಬೇಕು. ಇನ್ನಷ್ಟು ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡುವ ಕೆಲಸ ಸಂಸ್ಥೆಯಿಂದ ಆಗಲಿ ಎಂದರು.
ಪುತ್ತೂರು ನಗರಸಭಾ ಉಪಾಧ್ಯಕ್ಷ ಕೆ. ಬಾಲಚಂದ್ರರವರು ಮಾತನಾಡಿ ಕಾಲಕ್ಕೆ ತಕ್ಕುದಾದ ಬದಲಾವಣೆ ಇಲ್ಲಿ ಆಗಿದೆ. ಸಂಸ್ಥೆ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದೆ. ಸಿಬ್ಬಂದಿಗಳ ನಗುಮುಖದ ಸೇವೆ ಸಂಸ್ಥೆಯ ಬೆಳವಣಿಗೆಗೆ ಪೂರಕ. ವ್ಯವಹಾರದ ಜೊತೆಗೆ ಸಂಸ್ಥೆ ಸಮಾಜಮುಖಿಯಾಗಿರುವುದು ಅಭಿನಂದನಾರ್ಹ. ಜನರು ಬದಲಾವಣೆಯನ್ನು ಬಯಸಿದಂತೆ ಹೊಸತನವನ್ನು ನೀಡುವ ಅಗತ್ಯವಿದೆ. ವಿಸ್ತೃತಗೊಂಡ ಮಳಿಗೆಯ ಮೂಲಕ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ. ಲಾಭಾಂಶದಿಂದ ಸಮಾಜದ ಏಳಿಗೆಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಚಾರ. ಪುತ್ತೂರಿನ ಮಟ್ಟಿಗೆ ಸರಕಾರಿ ಶಾಲೆಗಳನ್ನು ಮೇಲಕ್ಕೆತ್ತುವಲ್ಲಿ ಪ್ರಯತ್ನಿಸುತ್ತಿರುವ ಪ್ರಪ್ರಥಮ ಸಂಸ್ಥೆ ಇದಾಗಿದೆ ಎನ್ನುವುದು ಹೆಮ್ಮೆ. ಸಂಸ್ಥೆ ಬೆಳೆದಂತೆ ಸರಕಾರಿ ಶಾಲೆಗಳಿಗೆ ಅನುದಾನಗಳು ಹೆಚ್ಚಾಗಿ ಸಿಗಲು ಸಾಧ್ಯ. ಆದ್ದರಿಂದ ನಾವೆಲ್ಲರು ಅವರಿಗೆ ಸಹಕಾರ ನೀಡಿ ಅವರ ಸಮಾಜಮುಖಿ ಚಟುವಟಿಕೆಯಲ್ಲಿ ನಾವೂ ಭಾಗಿಗಳಾಗೋಣ ಎಂದರು.
ಸರಕಾರಿ ಶಾಲೆಗಳಿಗೆ ಧನಸಹಾಯ ಹಸ್ತಾಂತರ
ಸಿಎಸ್ಆರ್ ಯೋಜನೆಯ ಮೂಲಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರ್ಯಕ್ಕೆ ರೂ. 61,550 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ವೆಗೆ ರೂ. 55, 000 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲಕ್ಕೆ ರೂ. 85,000 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕಕ್ಕೆ ರೂ 73,650 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿಗೆ 61,990 ರೂಪಾಯಿ ಮೊತ್ತದ ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು.
ವೇದಿಕೆಯಲ್ಲಿ ಜೋಸ್ ಆಲುಕ್ಕಾಸ್ ಸ್ಥಾನೀಯ ವ್ಯವಸ್ಥಾಪಕರಾದ ಬಿಜು ಟಿ. ಎಲ್., ಅಗಸ್ಟಿನ್, ಮೈಸೂರು ಶಾಖಾ ವ್ಯವಸ್ಥಾಪಕ ರತೀಶ್ ಸಿ. ಪಿ., ಪುತ್ತೂರು ಶಾಖಾ ವ್ಯವಸ್ಥಾಪಕ ಹರಿ, ಉಪ ವ್ಯವಸ್ಥಾಪಕ ಪ್ರಜೀಶ್ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ಶಾಖಾ ಸಿಬ್ಬಂದಿ ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಗ್ರಾಹಕರಿಂದ ತುಂಬಿದ ಶೋರೂಂ
ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಅಲುಕ್ಯಾಸ್ ಜ್ಯುವೆಲ್ಲರಿ ಚಿನ್ನಾಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿತ್ತು. ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಶೋರೂಂ ನವೀಕೃತ ಗೊಂಡು ಉದ್ಘಾಟನೆ ಸಂದರ್ಭದಲ್ಲಿ ಮೊದಲಿಗಿಂತಲೂ ಹೆಚ್ಚಿನ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹವೇ ಇಲ್ಲಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುವಂತಿದೆ. ಬೆಳಗ್ಗಿನಿಂದ ರಾತ್ರಿವರೆಗೂ ಶೋರೂಂ ಗ್ರಾಹಕರಿಂದ ತುಂಬಿಕೊಂಡಿದ್ದು, ತಮ್ಮಿಷ್ಟದ ಆಭರಣಗಳನ್ನು ಕೊಳ್ಳಲು ಜನ ಮುಗಿ ಬೀಳುತ್ತಿರುವುದು ಕಂಡುಬಂತು.
ಚಿನ್ನ ಖರೀದಿಗೆ ಮುಂಗಡ ಯೋಜನೆ
ಜೋಸ್ ಆಲುಕ್ಕಾಸ್ ನಲ್ಲಿ ವಿಶ್ವಾಸಾರ್ಹ ಮತ್ತು ಸುರಕ್ಷಿತ ಚಿನ್ನದ ಉಳಿತಾಯ, ಖರೀದಿ ಯೋಜನೆಗಳು ಲಭ್ಯವಿದೆ. 11 ತಿಂಗಳ ಅವಽಗೆ ನಿಽಷ್ಟ ಮೊತ್ತವನ್ನು ಪಾವತಿಸಿ ಮತ್ತು ಆ ದಿನದ ಚಿನ್ನದ ಬೆಲೆಯ ಪ್ರಕಾರ ಆ ಮೊತ್ತಕ್ಕೆ ಸಮಾನ ತೂಕದ ಚಿನ್ನವನ್ನು ಜಮಾ ಮಾಡಲಾಗುತ್ತದೆ. ಯೋಜನೆಯ ಮುಕ್ತಾಯದ ನಂತರ 18% ವರೆಗೆ ಮೇಕಿಂಗ್ ಚಾರ್ಜ್ ಇಲ್ಲದೆ ಚಿನ್ನಾಭರಣ ಖರೀದಿಸಬಹುದಾದ ಒನ್ ಟೈಮ್ ಪರ್ಚೇಸ್ ಅಡ್ವಾನ್ಸ್ ಸ್ಕೀಮ್ ಸೇರಿದಂತೆ ಹಲವಾರು ಚಿನ್ನಾಭರಣ ಖರೀದಿ ಯೋಜನೆಗಳು ಸಂಸ್ಥೆಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 91885 23916, 08251 298526ಗೆ ಸಂಪರ್ಕಿಸಬಹುದಾಗಿದೆ.