
ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಶಿಷ್ಯೆ, ಶಿಶಿಲದ ನೃತ್ಯಭೂಷಿಣಿ ಕಲಾ ಶಾಲೆಯ ನೃತ್ಯಗುರು ವಿದುಷಿ ಶ್ರದ್ಧಾ ಉಪ್ಪಿನಂಗಡಿ ಇವರ ನೇತೃತ್ವದಲ್ಲಿ ವಿಜಯದಶಮಿ ಹಾಗೂ ಗೆಜ್ಜೆ ಪೂಜೆ ಕಾರ್ಯಕ್ರಮ ಶಿಶಿಲ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಹಾಗೂ ಕಾರ್ಯದರ್ಶಿ ಆತ್ಮಭೂಷಣ್, ಸುಬ್ರಾಯ ಉಪ್ಪಿನಂಗಡಿ ಮತ್ತು ಶಾಂತ ಉಪ್ಪಿನಂಗಡಿ,
ಅಕಾಡೆಮಿಯ ಹಿರಿಯ ವಿದ್ಯಾರ್ಥಿಗಳಾದ ಪೃಥ್ವಿಶ್ರೀ ಹಾಗೂ ಭಾರತಿ ಕಡಬ ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಗೆಜ್ಜೆ ಪೂಜೆ ಸಲುವಾಗಿ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಗೆಜ್ಜೆ ಪೂಜೆ ನೆರವೇರಿಸಿ, ಗೆಜ್ಜೆಯನ್ನು ನೀಡಿ ಹರಸಲಾಯಿತು. ಹಿರಿಯರಾದ ಗಿರಿಜಾ ಕೆದಿಲಾಯ
ಶುಭ ಹಾರೈಸಿದರು. ಶ್ರಾವ್ಯ ಉಪ್ಪಿನಂಗಡಿ ನಿರೂಪಿಸಿದರು.