ವಿವೇಕಾನಂದ ಆ.ಮಾ.ಶಾಲಾ ವಿದ್ಯಾರ್ಥಿಗಳು ದಕ್ಷಿಣ-ಮಧ್ಯ ಕ್ಷೇತ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ  ಅ.3,4 ಮತ್ತು 5 ರಂದು ಜನಸೇವಾ ವಿದ್ಯಾಕೇಂದ್ರ ಚನ್ನೇನಹಳ್ಳಿ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ  ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಗಳಿಸಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಾಂತ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆತ್ಮಿ ಕೆ ಎಲ್ (ಲಕ್ಷ್ಮಣ ಗೌಡ ಮತ್ತು ಅಶ್ವಿನಿ ದಂಪತಿಗಳ ಪುತ್ರಿ), 100,200 ಮೀಟರ್ ಮತ್ತು 4×100 ರಿಲೇ ಪ್ರಥಮ ಸ್ಥಾನ,  ವಂಶಿತಾ  (ವಸಂತ ಕುಮಾರ್ ಮತ್ತು ಸುಜಾತಾ ದಂಪತಿಗಳ ಪುತ್ರಿ) 600 ಮೀಟರ್ ಪ್ರಥಮ, 4×100 ರಿಲೇ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ,  ದಿಶಾ ಬಿ (ಪುರುಷೋತ್ತಮ ಮತ್ತು ಸವಿತಾ  ದಂಪತಿಗಳ ಪುತ್ರಿ) 4×100 ರಿಲೇ ಪ್ರಥಮ ಸ್ಥಾನ,  ನಿಶ್ಮಾ ( ಪ್ರದೀಪ್ ಮತ್ತು ಪ್ರಶಾಂತಿ ದಂಪತಿಗಳ ಪುತ್ರಿ) ಡಿಸ್ಕಸ್ ನಲ್ಲಿ  ಪ್ರಥಮ ಹಾಗೂ ಶಾಟ್ ಪುಟ್ ನಲ್ಲಿ ತೃತೀಯ ಸ್ಥಾನ,  ಸಾನ್ವಿ ಆನಂದ್(ಆನಂದ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ) ಎತ್ತರ ಜಿಗಿತದಲ್ಲಿ ಪ್ರಥಮ, 4×100 ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಶರ್ವಿನ್ (ಚಿತ್ರನಾಯಗಂ ಮತ್ತು ಪ್ರವೀಣಾ ಕುಮಾರಿ ದಂಪತಿಗಳ ಪುತ್ರ) 80 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. 

17ರ ವಯೋಮಾನದ ಬಾಲಕಿಯರಲ್ಲಿ ದಿವಿಜ್ಞಾ (ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿಗಳ ಪುತ್ರಿ) 100 ಮೀ, 200ಮೀ, 400 ಮೀ ಓಟ ಹಾಗೂ 4×400 ಮೀಟರ್ ರಿಲೇಗಳಲ್ಲಿ  ಪ್ರಥಮ ಸ್ಥಾನ,  ಕ್ಷಮಾ ಜೆ ರ  (ಜಗದೀಶ ರೈ ಮತ್ತು ಶೋಭಾ ದಂಪತಿಗಳ ಪುತ್ರಿ) 4×400 ಮೀಟರ್ ರಿಲೇ ಪ್ರಥಮ ಹಾಗೂ  ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಸಾನ್ವಿತಾ ನೆಕ್ಕರೆ (ಉಮೇಶ್ ಮತ್ತು ಕವಿತಾ  ದಂಪತಿಗಳ ಪುತ್ರಿ) 4×400 ಮೀ ರಿಲೇ ಪ್ರಥಮ ಸ್ಥಾನ, 400 ಮೀಟರ್ ಹರ್ಡಲ್ಸ್ ದ್ವಿತೀಯ ಸ್ಥಾನ, ನಿಧಿಶ್ರೀ (ದೇರಣ್ಣ ಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ) 100 ಮೀಟರ್ ಹರ್ಡಲ್ಸ್ ನಲ್ಲಿ  ಪ್ರಥಮ ಹಾಗೂ 4×100 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ, ಮತ್ತು ಶ್ರೀರಕ್ಷಾ (ದೇವರಾಜ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ) 4×400 ಮೀಟರ್ ರಿಲೇಗಳಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. 

ಮೂರು ಸ್ವರ್ಣ ಪದಕ ವಿಜೇತೆ ಕುಮಾರಿ ದಿವಿಜ್ಞಾ 17ರ ವಯೋಮಾನದಲ್ಲಿ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿ ವಿಶೇಷ ಸಾಧನೆ ಮಾಡಿರುತ್ತಾರೆ. ಅಲ್ಲದೇ 14ರ ಮತ್ತು 17ರ ವಯೋಮಾನದ ಬಾಲಕಿಯರು ತಂಡ ಪ್ರಶಸ್ತಿ ಗಳಿಸಿದ್ದಾರೆ.

ಈ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರು ಇಲ್ಲಿಯೇ ನಡೆಯಲಿರುವ ವಿದ್ಯಾಭಾರತಿಯ ದಕ್ಷಿಣ -ಮಧ್ಯ ಕ್ಷೇತ್ರೀಯ ಕ್ರೀಡಾಕೂಟದಲ್ಲಿ  ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ  ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here