ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ವಿದ್ಯಾ ಸರಸ್ವತಿ ಮಾತೆಗೆ ಪೂಜೆ ಕಾರ್ಯಕ್ರಮ ಅ.6ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ರವರು ಪೂಜಾ ವಿಧಾನವನ್ನು ಎಲ್ಲಾ ವಿದ್ಯಾರ್ಥಿಗಳ ಪುಸ್ತಕಗಳನ್ನು ದೇವಿ ಮಂಟಪದಲ್ಲಿಟ್ಟು ಮಹಾಮಂಗಳಾರತಿ ನೆರವೇರಿಸಿ ಶ್ರೀದೇವಿಯು ಎಲ್ಲರಿಗೂ ಸನ್ಮoಗಳವನ್ನು ಉಂಟುಮಾಡಲಿ ಎಂದು ಹಾರೈಸಿದರು.
ವಿದ್ಯಾಭಾರತಿ ಕರ್ನಾಟಕ ದ.ಕ ಜ್ಞಾನ – ವಿಜ್ಞಾನ ಮೇಳ 2025-26 ತೆಲಂಗಾಣ ದ ದಕ್ಷಿಣ ಭಾರತ ಪ್ರಾಂತ್ಯಮಟ್ಟದ ಕ್ಲೇ-ಮಾಡೆಲ್ ನಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ
ಮಾl ಅಜಿತೇಶ್ ಜೆ ಎನ್ ಇವರಿಗೆ ಪ್ರಶಸ್ತಿ ವಿತರಿಸಿ ಆಶೀರ್ವದಿಸಿದರು. ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳಿಂದ ಸರಸ್ವತಿ ದೇವಿಗೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಶಾಲಾ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಕೆದಿಲಾಯ, ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.