ನೆಲ್ಯಾಡಿ: ಇಲ್ಲಿನ ಪಡ್ಡಡ್ಕ ನಿವಾಸಿ, ಕೃಷಿಕ ಕೆ.ಕೆ.ಜೋಸೆಫ್ (95ವ.)ಅವರು ಅನಾರೋಗ್ಯದಿಂದ ಅ.7ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಕೆ.ಕೆ.ಜೋಸೆಫ್ ಅವರು ವಿವಿಧ ಸಂಘಟನೆಗಳಲ್ಲಿ, ಚರ್ಚ್ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪುತ್ರರಾದ ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಡೊಮಿನಿಕ್ ಜೋಸ್, ಕೃಷಿಕ ಕುರಿಯನ್ ಕೆ.ಜೆ., ನೆಲ್ಯಾಡಿ ಮಾತಾ ಲ್ಯಾಬ್ನ ಜೋಸ್ ಕೆ.ಜೆ., ಪುತ್ರಿಯರಾದ ಕೇರಳದಲ್ಲಿ ನರ್ಸ್ ಆಗಿರುವ ಆನ್ಸಿ, ಕತಾರ್ನಲ್ಲಿ ನರ್ಸ್ ಆಗಿರುವ ಜೆಸ್ಸಿ ಅವರನ್ನು ಅಗಲಿದ್ದಾರೆ. ಕೆ.ಕೆ.ಜೋಸೆಪ್ರವರ ಪತ್ನಿ ಅಗ್ನೇಸ್ರವರು ನಾಲ್ಕು ತಿಂಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು.
