ಪುತ್ತೂರು:ಪಾಲ್ತಾಡು ದಿ.ಶ್ರೀನಿವಾಸ ಆಳ್ವರ ಪತ್ನಿ ನಡಿಬೈಲುಬೀಡು ಲಕ್ಷ್ಮೀ ಎಸ್.ಆಳ್ವ(73ವ.)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಅ.5ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರಿಯರಾದ ಶ್ರೀಲತಾ,ಶ್ರೀಕಲಾ,ಶ್ರೀದೇವಿ, ಪುತ್ರ ರವಿಪ್ರಸಾದ್ ಆಳ್ವ,ಅಳಿಯಂದಿರಾದ ನರೇಶ್ ರೈ ಪುಡ್ಕಾಜೆ, ಹರಿಪ್ರಸಾದ್ ಭಂಡಾರಿ,ಜಯಪ್ರಸಾದ್ ರೈ, ಸೊಸೆ ಸೌಮ್ಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.