ಪುತ್ತೂರು ತಾ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ವತಿಯಿಂದ ಗಾಂಧಿ ಜಯಂತಿ : ಪೂರ್ವಭಾವಿ ಸಭೆ

0



ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗಾಂಧಿ ಜಯಂತಿ ಆಚರಣೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಪುತ್ತೂರು ತಾಲೂಕಿನಲ್ಲಿ ಅ.15ರಂದು ನಡೆಸುವ ಬಗ್ಗೆ ಪೂರ್ವ ಭಾವಿ ಸಭೆೆ ಇತ್ತೀಚೆಗೆ ಅರಿಯಡ್ಕ ವಲಯದಲ್ಲಿ ವಲಯದ ಅಧ್ಯಕ್ಷ ದಿನೇಶ್ ರೈ ಕುತ್ಯಾಳ ರವರ ಅಧ್ಯಕ್ಷತೆಯಲ್ಲಿ ವಲಯದ  ಸೇವಾಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಯಿತು.

 ಈ ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಹರೀಶ್ ಕುಲಾಲ್ ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಸಂಘದ ಎಲ್ಲಾ ಸದಸ್ಯರಿಗೂ, ಊರಿನ ಗಣ್ಯರಿಗೂ , ಭಜನಾ ಮಂದಿರ , ದೇವಸ್ಥಾನ, ಹಾಲಿನ ಡೈರಿಯವರಿಗೂ ಶಾಲಾ ಕಾಲೇಜಿನ ಮುಖ್ಯಸ್ಥರಿಗೂ ಹಾಗೂ ಯೋಜನೆ ಮತ್ತು ಯೋಜನೆತರ ಸದಸ್ಯರಿಗೂ ತಿಳಿಸುವಂತೆ ಕರೆ ನೀಡಿದರು. 

ಕಾರ್ಯಕ್ರಮವು ಸಾಮೂಹಿಕ ದ್ಯೇಯಗೀತೆಯೊಂದಿಗೆ ಆರಂಭಗೊಂಡಿತು. ಮಾಡನ್ನೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಲೀಲಾವತಿ ಸ್ವಾಗತಿಸಿ, ಮೇನಾಲ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುಂದರ್ ಜಿ ನಿರೂಪಿಸಿ. ವಂದನಾರ್ಪಣೆ ಮಾಡಿದರು. ಸಿ.ಎಸ್.ಸಿ ಕೇಂದ್ರದ ಸಂಧ್ಯಾ ಸಹಕರಿಸಿದರು.

LEAVE A REPLY

Please enter your comment!
Please enter your name here