ಪುತ್ತೂರು: ಸುದಾನ ಶಾಲೆಯಲ್ಲಿ ಅ.7ರಂದು ವಾಲ್ಮೀಕಿ ಜಯಂತಿ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿ ನಾಯಕ ವಿಸ್ಮಯ್ ಬಿ.ವಿ ರವರು ಮಹರ್ಷಿ ವಾಲ್ಮೀಕಿಯವರ ಕಿರು ಪರಿಚಯ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ದೀಪಬೆಳಗಿ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಸಂಸ್ಕೃತ ಶಿಕ್ಷಕಿ ಚೇತನಾ ಪಿ ಕೆ ರವರು ಮಹರ್ಷಿ ವಾಲ್ಮೀಕಿಯವರ ಬದುಕು – ಬರಹವನ್ನು ವಿವರಿಸುವುದರ ಮೂಲಕ ವಾಲ್ಮೀಕಿ ಜಯಂತಿ ಆಚರಣೆಯ ಮಹತ್ವವನ್ನು ವಿವರಿಸಿದರು. ಶಾಲಾ ಲಹರಿ ಸಾಹಿತ್ಯ ಸಂಘವು ಈ ಕಾರ‍್ಯಕ್ರಮವನ್ನು ಆಯೋಜಿಸಿತ್ತು.