ವಿಟ್ಲ: ಪೆರಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸಂಧ್ಯಾಲಕ್ಷ್ಮೀ ರವರು ಅಧಿಕಾರ ವಹಿಕೊಂಡರು.ಈ ಸಂದರ್ಭದಲ್ಲಿ ನಿರ್ಗಮಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾರವರು ಅಧಿಕಾರ ಹಸ್ತಾಂತರ ಮಾಡಿದರು.
ಸಂದ್ಯಾಲಕ್ಷ್ಮೀ ರವರು ಈ ಹಿಂದೆ ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಶಂಭುಶರ್ಮರವರು ವೀರಕಂಬ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡು ತೆರಳಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಎಂ ಪೆರಾಜೆ, ಸದಸ್ಯರಾದ ಮಮತಾ ಕುಮಾರಿ, ಹರೀಶ್ಚಂದ್ರ ರೈ, ಪಂಚಾಯತ್ ಕಾರ್ಯದರ್ಶಿಯವರಾದ ನಾರಾಯಣ ನಾಯ್ಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.