ಪುತ್ತೂರು: ಪುತ್ತೂರಿನ ಡಾ| ಕೋಟ ಶಿವರಾಮ ಕಾರಂತರ ಬಾಲವನದಲ್ಲಿ ಅ.13ರಂದು ಸಂಜೆ 6:30ಕ್ಕೆ ಕಾರಂತರ ಕಾದಂಬರಿ ಆಧಾರಿತ ನಾಟಕ “ಮೈ ಮನಗಳ ಸುಳಿಯಲ್ಲಿ” ಪ್ರದರ್ಶನಗೊಳ್ಳಲಿದೆ.
ನಿರ್ದಿಗಂತ ಮೈಸೂರು ಇದರ ಕಲಾವಿದರು ಅಭಿನಯಿಸುವ ಈ ನಾಟಕವು ಡಾ ಕೋಟಾ ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ “ಮೈ ಮನಗಳ ಸುಳಿಯಲ್ಲಿ” ಇದರ ರಂಗರೂಪವಾಗಿದೆ. ಈ ನಾಟಕವನ್ನು ಪ್ರಸಿದ್ಧ ರಂಗ ನಿರ್ದೇಶಕ ಅಮಿತ್ ಜೆ. ರೆಡ್ಡಿ ಅವರು ನಿರ್ದೇಶಿಸಿದ್ದಾರೆ. ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ| ಕೋಟಾ ಶಿವರಾಮ ಕಾರಂತರ ಬಾಲವನ ಸಮಿತಿ, ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಇದರ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಎಲ್ಲ ನಾಟಕ ಅಭಿಮಾನಿಗಳಿಗೆ ಉಚಿತ ಪ್ರವೇಶವಿದೆ.