ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಏಳು ಮಂದಿ ಫಲಾನುಭವಿಗಳಿಗೆ ಒಟ್ಟು 2,70,561 ಲಕ್ಷ ರೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರಧನ ಬಿಡುಗಡೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಕಡವಿನ ಬಾಗಿಲು ನಿವಾಸಿ ಸಿದ್ದಿಕ್‌ರವರಿಗೆ 7000, ಒಳಮೊಗ್ರು ಗ್ರಾಮದ ಬೊಳ್ಳಾಡಿ ನಿವಾಸಿ ಹರಿಪ್ರಸಾದ ಡಿ ರವರಿಗೆ 19918, ಒಳಮೊಗ್ರು ಗ್ರಾಮದ ನೀರ್ಪಾಡಿ ನಿವಾಸಿ ಸಾಯಿನಿಧಿಗೆ 15000, ರಂಜನ್ ಮಂಗಳೂರುರಿಗೆ 98 ಸಾವಿರ, ಖತೀಜತ್ ರಾಫಿಯ ಬಂಟ್ವಾಳಗೆ 1 ಲಕ್ಷ , ರಾಜೀವಿ ಸರ್ವೆರಿಗೆ 20,675 ಹಾಗೂ ಗೋಳ್ತಮಜಲು ಪೂರ್ಲಿಪ್ಪಾಡಿ ನಿವಾಸಿ ಒಮಯರಿಗೆ 19,918 ರೂ ಪರಿಹಾರ ಹಣ ಮಂಜೂರಾಗಿದೆ.
ಪರಿಹಾರ ಧನವು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಗೊಳ್ಳಲಿದೆ. ಅನಾರೋಗ್ಯ ಪೀಡಿತ ಮತ್ತು ಅಶಕ್ತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಪುತ್ತೂರು ಶಾಸಕರ ಶಿಫಾರಸ್ಸಿನಂತೆ ಈ ಏಳು ಮಂದಿಗೆ ನೆರವು ದೊರಕಿದೆ.