ಪುತ್ತೂರು: ಡಿವೈನ್ ಪಾರ್ಕ್ ಟ್ರಸ್ಟ್ (ರಿ.) ಸಾಲಿಗ್ರಾಮ ಇದರ ಅಂಗಸಂಸ್ಥೆ ವಿವೇಕ ಜಾಗ್ರತ ಬಳಗ ಕಡಬ – ಬಿಳಿನೆಲೆ ಇದರ ವತಿಯಿಂದ, ಶ್ರೀ ಶಾರದಾಂಭ ಭಜನಾ ಮಂದಿರ ಕೈಕಂಬದಲ್ಲಿ ಗರ್ಭಿಣಿಯರ ಸರ್ವತೋಮುಖ ಬೆಳವಣಿಗೆಗಾಗಿ ಗರ್ಭಕ್ಕೆ ಸುಸಂಸ್ಕಾರ ಕೊಡುವ ವಿಶಿಷ್ಟ ಕಾರ್ಯಕ್ರಮ “ವಾತ್ಸಲ್ಯ ಶ್ರೀ” ಅ.11ರಂದು ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಶ್ವಿನಿ ಯಶೋಧರ್ ವಹಿಸಿದ್ದರು. ಶಾರದಾ ಕೇಶವ್ ಪುತ್ತಿಲ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೇಮಾ ಪ್ರಭಾಕರ್ ಹಾಗೂ ಚತುರ ಸೇವಕರಾದ ಸುಂದರ ಗೌಡ ಏನೆಕಲ್ ಉಪಸ್ಥಿತರಿದ್ದರು.
14 ಮಂದಿ ಗರ್ಭಿಣಿ ಸ್ತ್ರೀಯರು ಪಾಲ್ಗೊಂಡಿದ್ದು, ಅವರಿಗೆ ಶ್ರೀರಾಮರಕ್ಷಾ ಸ್ತೋತ್ರ, ಗರ್ಭಿಣಿಯರಿಗೆ ಕಿವಿಮಾತು ಸಧ್ಗ್ರಂಥ, ಅರಶಿಣ, ಕುಂಕುಮ, ಬಳೆ, ಹೂವು, ಹಣ್ಣು, ತೆಂಗಿನಕಾಯಿ ವಿತರಿಸಿ ಸದ್ಗುರು ಡಾ.ಎ ಚಂದ್ರಶೇಖರ ಉಡುಪರವರ ಮೂಲಕ ಅವರ ಉತ್ತಮ ಆರೋಗ್ಯ ಹಾಗೂ ಸುಲಭ ಸುಖ ಪ್ರಸವಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಮಾರ್ಗದರ್ಶನದ ಮೇರೆಗೆ ಗರ್ಭದಲ್ಲಿ ಮಗುವಿಗೆ ಅತ್ಯುತ್ತಮ ಸಂಸ್ಕಾರ ಕೊಡುವುದರ ಮೂಲಕ ವ್ಯಕ್ತಿತ್ವ ನಿರ್ಮಾಣದ ಕೈಂಕರ್ಯದಲ್ಲಿ ಮುಂದಾಗುವ ಸುಲಭ ಮಾರ್ಗವನ್ನು ತಿಳಿಸಿಕೊಡುವುದರೊಂದಿಗೆ ಆಧ್ಯಾತ್ಮಿಕ ತಳಹದಿಯಲ್ಲಿ ದೇಶಕ್ಕೆ ಉತ್ತಮ ಪ್ರಜೆಗಳ ನಿರ್ಮಾಣದ ಬಗ್ಗೆ ವಿವರಿಸಲಾಯಿತು. ಯಶೋಧರ್ ಬಾಲಡ್ಕ ಕಾರ್ಯಕ್ರಮ ನಿರೂಪಿಸಿದರು.