ರಾಮಕುಂಜ: ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ-ಬಾಲಕಿಯರ ಅಥ್ಲೆಟಿಕ್ ಸ್ಪರ್ಧೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಮೋಕ್ಷಿತ್ ಆರ್ ಗೌಡ (ಎತ್ತರ ಜಿಗಿತ-ಪ್ರಥಮ, ಉದ್ದ ಜಿಗಿತ-ದ್ವಿತೀಯ, 200ಮೀಟರ್ ಓಟ- ತೃತೀಯ), ತೇಜಸ್ವಿ (600 ಮೀಟರ್ ಓಟ-ಪ್ರಥಮ), ಗುಣವಂತ ಗೌಡ(ಚಕ್ರ ಎಸೆತ- ಪ್ರಥಮ), ತನುಷ್ ಬಿ.ಎಂ (ಎತ್ತರ ಜಿಗಿತ -ದ್ವಿತೀಯ), ತೇಜಸ್ವಿ (600 ಮೀಟರ್ ಓಟ -ದ್ವಿತೀಯ), ಚಿನ್ಮಯಿ (ಗುಂಡು ಎಸೆತ -ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಭುವನ (ಎತ್ತರ ಜಿಗಿತ -ದ್ವಿತೀಯ, 80 ಮೀಟರ್ ಹರ್ಡಲ್ಸ್- ತೃತೀಯ), ಅಭಿಜ್ಞಾ( 80 ಮೀಟರ್ ಹರ್ಡಲ್ಸ್- ದ್ವಿತೀಯ, 600 ಮೀಟರ್ ಓಟ- ತೃತೀಯ) ಪ್ರಶಸ್ತಿ ಪಡೆದುಕೊಂಡಿದ್ದಾರೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಕಿರಣ್ (ಈಟಿ ಎಸೆತ- ಪ್ರಥಮ, ಗುಂಡೆಸೆತ- ದ್ವಿತೀಯ, ತ್ರಿವಿಧ ಜಿಗಿತ- ದ್ವಿತೀಯ), ಮೋಹಿತ್ ಪಿ (ಈಟಿ ಎಸೆತ -ದ್ವಿತೀಯ), ಭೌತಿಕ್(100 ಮೀಟರ್ ಓಟ- ತೃತೀಯ), ರೋಹನ್ (5 ಕಿ.ಮೀ ನಡಿಗೆ ಸ್ಪರ್ಧೆ -ಪ್ರಥಮ, 1500 ಮೀಟರ್ ಓಟ- ದ್ವಿತೀಯ), ಕಿಶೋರ್ ಡಿ.ಕೆ (ಕೋಲ್ಜಿಗಿತ -ಪ್ರಥಮ, 400 ಮೀಟರ್ ಓಟ- ದ್ವಿತೀಯ), ಧನುಷ್ ಗೌಡ(ಹ್ಯಾಮರ್ ತ್ರೋ -ದ್ವಿತೀಯ), ಆಕಾಶ್ ಗೌಡ (3000 ಮೀಟರ್ ಓಟ- ದ್ವಿತೀಯ, 100ಮೀಟರ್ ಓಟ -ತೃತೀಯ), ಗಗನ್ ಎಂ(ಎತ್ತರ ಜಿಗಿತ -ದ್ವಿತೀಯ), ಶೌರ್ಯ ಕೆ ದಿನೇಶ್ (400 ಮೀಟರ್ ಓಟ -ತೃತೀಯ), ಯಶವಂತ (ಗುಂಡೆಸೆತ- ತೃತೀಯ), ವೇದಾಂತ್ (5 ಕಿ.ಮೀ ನಡಿಗೆ- ದ್ವಿತೀಯ), ತೇಜಸ್ ಗೌಡ (ಕೋಲ್ಜಿಗಿತ -ದ್ವಿತೀಯ, 4/100 ಮೀ.ರಿಲೇ- ಪ್ರಥಮ), ಬಾಲಕಿಯರ ವಿಭಾಗದಲ್ಲಿ ಶಾರ್ವರಿ ಕೆ.ರೈ(ಹ್ಯಾಮರ್ ತ್ರೋ -ಪ್ರಥಮ, ಚಕ್ರ ಎಸೆತ -ತೃತೀಯ, ಗುಂಡೆಸೆತ -ತೃತೀಯ), ನಮೃತ (3 ಕಿ.ಮೀ ನಡಿಗೆ-ಪ್ರಥಮ) ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮಾ ಬಿ., ದಿವ್ಯಾ ಪಿ.ಎನ್., ರಾಘವ, ಕಿಶನ್ ತರಬೇತಿ ನೀಡಿದ್ದರು. ಸಂಸ್ಥೆಯ ಆಡಳಿತಾಧಿಕಾರಿ, ವ್ಯವಸ್ಥಾಪಕರು, ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿಯರು, ಶಿಕ್ಷಕ-ಶಿಕ್ಷಕೇತರ ವೃಂದದವರು ಶುಭ ಹಾರೈಸಿದ್ದಾರೆ.
ಬಾಲಕರ ವಿಭಾಗದಲ್ಲಿ ಪ್ರಥಮ ಸಮಗ್ರ ತಂಡ ಪ್ರಶಸ್ತಿ;
14 ಮತ್ತು 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಾಲಾ ತಂಡ ಪ್ರಥಮ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಶಾಲೆಯ 18 ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.