ಉಪ್ಪಿನಂಗಡಿ: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದೀಪಾವಳಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವ ವಸ್ತ್ರ ವಿತರಣೆ ಕಾರ್ಯಕ್ರಮ ‘ಅಶೋಕ ಜನ- ಮನ’ ಕಾರ್ಯಕ್ರಮವು ಈ ಬಾರಿ ಅ.20ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮ 34 ನೆಕ್ಕಿಲಾಡಿಯ ಮೈಂದಡ್ಕ ಮೈದಾನದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ವಿತರಿಸಿ ಮಾತನಾಡಿದ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಈ ಬಾರಿ ಅ.೨೦ರಂದು ಪುತ್ತೂರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಲಿದ್ದು, ಸಾಮೂಹಿಕ ಸಹಭೋಜನದೊಂದಿಗೆ ಮಕ್ಕಳಿಗೆ, ಮಾತೆಯರಿಗೆ, ಪುರುಷರಿಗೆ ದೀಪಾವಳಿಯ ಉಡುಗೊರೆಯಾಗಿ ಈ ಬಾರಿ ಒಬ್ಬರಿಗೆ ಸ್ಟೀಲ್ ತಟ್ಟೆ, ಲೋಟ ಹಾಗೂ ಪಿಂಗಾಣಿ, ಚಮಚ ಹಾಗೂ ಬಾತ್ ಟವೆಲ್ ಅನ್ನು ಹಂಚಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸೇರಿದಂತೆ ರಾಜಕೀಯ ನಾಯಕರು ಭಾಗವಹಿಸಲಿದ್ದು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಗೂಡು ದೀಪ ಸ್ಪರ್ಧೆಯೂ ನಡೆಯಲಿದೆ. ಆದ್ದರಿಂದ ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದರು.
೩೪ ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಮಾತನಾಡಿ, ಬಡವರ ಸೇವೆಗಾಗಿಯೇ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಈ ಟ್ರಸ್ಟ್ ನಿರ್ಮಾಣವಾಗಿದ್ದು, ಟ್ರಸ್ಟ್ ವತಿಯಿಂದ ಈಗಾಗಲೇ ಪಕ್ಷ, ಜಾತಿ, ಧರ್ಮ ನೋಡದೇ ಬಡವರಿಗಾಗಿ ಹಲವು ಸೇವೆಗಳನ್ನು ಮಾಡಲಾಗಿದೆ. ಈ ಕಾರ್ಯಕ್ರಮ ಕೂಡಾ ಪಕ್ಷಾತೀತ ಹಾಗೂ ಧರ್ಮಾತೀತ ಕಾರ್ಯಕ್ರಮವಾಗಿದ್ದು, ಈ ಬಾರಿ ಒಂದು ಲಕ್ಷ ಜನರನ್ನು ಸೇರಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದ್ದರಿಂದ ನಿಮ್ಮ ಮನೆ ಕಾರ್ಯಕ್ರಮವೆಂದೇ ತಿಳಿದು ಎಲ್ಲರೂ ಇದರಲ್ಲಿ ಭಾಗವಹಿಸಬೇಕು. ನಿಮ್ಮ ಹತ್ತಿರದ ಮನೆಯವರನ್ನು ಕರೆ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಪ್ರಮುಖರಾದ ಉದಯಕುಮಾರ್, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್, ಜತೀಂದ್ರ ಶೆಟ್ಟಿ, ಅಸ್ಕರ್ ಅಲಿ, ಅಬ್ದುರ್ರಹ್ಮಾನ್ ಯುನಿಕ್, ಹಮೀದ್ ಪಿ.ಟಿ., ಇಸಾಕ್, ಅಬ್ದುಲ್ ಖಾದರ್ ಆದರ್ಶನಗರ, ಬಾಬು ನಾಯ್ಕ, ಸುಹಾಸ್ ಕೊಳಕ್ಕೆ, ಗಣೇಶ್ ನಾಯಕ್, ಅಶೋಕ್ ನಾಯಕ್, ಜಯಶೀಲ ಶೆಟ್ಟಿ, ಸುರೇಶ್ ದರ್ಬೆ, ಬಬಿತಾ ಮಿನೇಜಸ್, ಅರುಣ್ ಬೀತಲಪ್ಪು, ಶಿವರಾಮ ಶೆಟ್ಟಿ, ಲೀಲಾ ಬೀತಲಪ್ಪು ಮತ್ತಿತ್ತರರು ಉಪಸ್ಥಿತರಿದ್ದರು.