ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ನಿವೃತ್ತ ಎಸ್.ಪಿಯಾಗಿರುವ ಪುತ್ತೂರು ನಿವಾಸಿ ರಾಮದಾಸ್ ಗೌಡ ಅವರು ಆಯ್ಕೆಗೊಂಡಿದ್ದಾರೆ.

ಸಂಘದ 2025-27ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ರಾಮದಾಸ ಗೌಡ ಅವರನ್ನು ಸರ್ವಾನುಮತದಿಂದ ಕಾರ್ಯಕಾರಿ ಮಂಡಳಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಉಪಾಧ್ಯಕ್ಷರಾಗಿ ಶ್ರೀನಿವಾಸ ನಾಯಕ್, ಕಾರ್ಯದರ್ಶಿಯಾಗಿ ಸುಭಾಶ್ಚಂದ್ರ ಕಣ್ವತೀರ್ಥ, ಕೋಶಧಿಕಾರಿಯಾಗಿ ಮೋಹನ್‌ರಾವ್, ಸಹ ಕಾರ್ಯದರ್ಶಿಯಾಗಿ ಡಾ. ವನಜ ಆಯ್ಕೆಗೊಂಡರು.
ಚುನಾವಣೆಯಲ್ಲಿ ಕಾರ್ಯಕಾರಿಗೆ ರಾಮದಾಸ ಗೌಡ, ಸುಭಾಶ್ಚಂದ್ರ ಕಣ್ವತೀರ್ಥ, ಮೊಹನ್‌ರಾವ್, ಮುರಳೀಧರ ಕಾಮತ್, ಆನಂದ.ಎ, ಭವ್ಯ, ಸುರೇಶ್ ರಾವ್ ಲಾಡ್, ಶ್ರೀನಿವಾಸ ನಾಯಕ ಖಾಲಿದ್ ತಣ್ಣೀರುಬಾವಿ, ಡಾ. ವನಜ, ಲೋಹಿದಾಸ್, ದಯಾಕರ್ ಧರ್ಮಣ ನಾಯಕ್, ಸನಿಲ್.ಬಿ.ಎಲ್, ಜೆ.ವಿ ಶೆಟ್ಟಿ ಆಯ್ಕೆಗೊಂಡರು.
ನಿಕಟ ಪೂರ್ವ ಅಧ್ಯಕ್ಷರಾದ ನಿಟ್ಟೆಗುತ್ತು ಕರ್ನಲ್ ಶರತ್ ಭಂಡಾರಿ ಇವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚುನಾವಣಾ ಪ್ರಕ್ರಿಯೆಯನ್ನು ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ನಡೆಸಿಕೊಟ್ಟರು. ರಾಮದಾಸ ಗೌಡ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾಗಿದ್ದಾರೆ.