ಕ್ಯಾಲ್ಕುಲೇಟರ್ ನಲ್ಲಿ 1 ರಿಂದ 10 ರವರೆಗೆ 10 ಬಾರಿ 16 ವರ್ಷದ ವಯೋಮಾನ ವಿಭಾಗದಲ್ಲಿ 42 ಸೆಕೆಂಡ್ ಗಳಲ್ಲಿ ದಾಖಲೆ ಗೆ ಪುರಸ್ಕಾರ
ಪುತ್ತೂರು: ಬೇರೆ ಬೇರೆ ಕ್ಷೇತ್ರ ದಲ್ಲಿ ವಿಶ್ವ ಸಾಧನೆಗೆ ತರಬೇತಿ ನೀಡುವ ದಿಲ್ ಹಿಝ್ ವರ್ಲ್ಡ್ ಸ್ಕೂಲ್ ಇದರ ವಿದ್ಯಾರ್ಥಿ ಸುಳ್ಯದ ಜಟ್ಟಪ್ಪಳ್ಳ ಅನ್ಸಾರಿಯ ಬಳಿ ಹರ್ಲಡ್ಕ ವಿಲ್ಲಾದ ನಿವಾಸಿ ಮಹಮ್ಮದ್ ರುವೈದ್ ಅತೀ ವೇಗದಲ್ಲಿ 1 ರಿಂದ 10 ರವರೆಗೆ ಅನುಕ್ರಮವಾಗಿ ಕ್ಯಾಲ್ಕುಲೇಟರ್ ಉಪಯೋಗಿಸಿ 42 ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿ 16 ವರ್ಷ 8 ತಿಂಗಳ 26 ದಿವಸದ ಅತೀ ಕಡಿಮೆ ವಯೋಮಾನ ವಿಭಾಗದಲ್ಲಿ ಇಂಟೆರ್ ನ್ಯಾಶನಲ್ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ನಲ್ಲಿ ನಲ್ಲಿ ವಿಶ್ವ ದಾಖಲೆ ಮಾಡಿರುತ್ತಾರೆ.
ಈ ಸಾಧನೆ ಗೆ ಗೌರವ ಪುರಸ್ಕಾರ ಮತ್ತು ಪ್ರಶಸ್ತಿ ಪ್ರದಾನ ಶೀಘ್ರದಲ್ಲಿಯೇ ಕ್ಯಾಲಿಕಟ್ ನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.ಮಹಮ್ಮದ್ ರುವೈದ್ ಪ್ರಸ್ತುತ ಕೇರಳದ ಪ್ರಸಿದ್ಧ ವಿದ್ಯಾ ಸಂಸ್ಥೆ ಪುನೂರ್ ಗಾರ್ಡನ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಸುಳ್ಯ ಅನ್ಸರಿಯಾ ಎಜುಕೇಶನ್ ಸೆಂಟರ್ ಪ್ರದಾನ ಕಾರ್ಯದರ್ಶಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ಮತ್ತು ಉಮಯಿರ ದಂಪತಿಗಳ ಪುತ್ರ.