ಬಡಗನ್ನೂರು: ಗ್ರಾಮ ಪಂಚಾಯತ್ ಒಂದು ದೇವಾಲಯ ಇದ್ದಂತೆ, ಇಲ್ಲಿ ಯಾವುದೇ ಜಾತಿ, ಮತ, ಭೇಧವಿಲ್ಲದೆ ಎಲ್ಲರೂ ಸಮಾನರು ಎಂಬ ನಿಟ್ಟಿನಲ್ಲಿ ಕೆಲಸ ಮಾಡಬೇಕು. ರಾಜಕಾರಣವು ಒಂದು ಸ್ಟಾರ್ ಎಲ್ಲರಿಗೂ ಈ ಭಾಗ್ಯ ಭಗವಂತ ಕರುಣಿಸುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.

ಆವರು ಬಡಗನ್ನೂರು ಗ್ರಾ.ಪಂ ನ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆರವರ ಅಧ್ಯಕ್ಷತೆಯಲ್ಲಿ ಅ.15ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಶೀಲಾ ಪಕ್ಯೊಡು ಅಭಿವೃದ್ಧಿ ಅಧಿಕಾರಿ ಕೆ. ಪಿ ಸುಬ್ಬಯ್ಯ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ, ಧರ್ಮೆಂದ್ರ ಕುಲಾಲ್ ಪದಡ್ಕ, ಲಿಂಗಪ್ಪ ಗೌಡ ಮೋಡಿಕೆ, ಪದ್ಮನಾಭ ಕನ್ನಡ್ಕ, ಕುಮಾರ ಅಂಬಟೆಮೂಲೆ, ಹೇಮಾವತಿ ಮೋಡಿಕೆ, ದಮಯಂತಿ ಕೆಮನಡ್ಕ, ಶ್ರೀಮತಿ ಕನ್ನಡ್ಕ ಹಾಗೂ ಶಾಸಕರ ಆಪ್ತ ಸಲಹೆಗಾರ ಅವಿನಾಶ್ ಬಿ. ಆರ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ ಪಿಡಿಒ ಕೆ. ಪಿ ಸುಬ್ಬಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಕೊರಗಪ್ಪ ನಾಯ್ಕ್ ವಂದಿಸಿದರು ಸದಸ್ಯ ಸಂತೋಷ ಆಳ್ವಗಿರಿಮನೆ ಕಾರ್ಯಕ್ರಮ ನಿರೂಪಿಸಿ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.
ಉತ್ತಮ ನಿರ್ವಹಣೆ ಬಗ್ಗೆ ಅಭಿನಂದನೆ
ಸಭೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತರಿ ಯೋಜನೆ ಕಾಮಗಾರಿ, 15ನೇ ಹಣಕಾಸು ಯೋಜನೆ ಕಾಮಗಾರಿ, ಹಾಗೂ ಕುಡಿಯುವ ನೀರು ಮತ್ತು ನೖೆರ್ಮಲ್ಯ ಯೋಜನೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ ಶಾಸಕರು ಉಳಿದ ಪಂಚಾಯತಿಗೆ ಹೋಲಿಸಿದರೆ ಬಡಗನ್ನೂರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು.
ಚೆಕ್ ವಿತರಣೆ
ಶೇಕಡಾ 5 ಮತ್ತು ಶೇಕಡಾ 25 ಆನುದಾನದಲ್ಲಿ 3 ಮಂದಿ ವಿಕಲಚೇತನ ಪಲಾನುಭವಿಗಳಿಗೆ ಮತ್ತು ಒಂದು ಫಲಾನುಭವಿಗೆ ಶವ ಸಂಸ್ಕಾರ ಸಹಾಯ ಧನದ ಚೆಕನ್ನು ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ವಿತರಣೆ ಮಾಡಿದರು.
ಪ್ರಮುಖ ನಿರ್ಣಯಗಳು
* ಹಳೆಯ ಕೆರೆ ಬಾವಿ ಹೂಳೆತ್ತುವ ಯೋಜನೆ ಉತ್ತಮ ಯೋಜನೆ ಅದನ್ನು ಪುನಃ ಆರಂಭಿಸಬೇಕು.
.* ವಸತಿ ಯೋಜನೆ ಅನುದಾನ ಈಗಿರುವ 1.75 ಲಕ್ಷ ವನ್ನು 5ಲಕ್ಷ ರೂಪಾಯಿ ಹೆಚ್ಚಳ ಮಾಡಬೇಕು
* ಮಳೆಗಾಲದಲ್ಲಿ ಹೊಳೆಗಳಲ್ಲಿ ಹ್ಯೊಗೆಯಿಂದ ನೀರು ತುಂಬಿ ಹರಿದು ಕೃಷಿ ನಾಶವಾಗುತ್ತಿದ್ದು ಹ್ಯೊಗೆ ತೆಗೆಯಲು ಅನುಮತಿ ನೀಡಬೇಕು
* ಪಂಚಾಯತ್ ನಿವೇಶನಕ್ಕೆ ಕಾಯ್ದಿರಿಸಿದ ಕನ್ನಡ್ಕ ಪ್ರದೇಶದ ರಸ್ತೆ ಅಭಿವೃದ್ಧಿ
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿರವರನ್ನು ಪಂಚಾಯತ್ ಅವರಣದಲ್ಲಿ ಹೂಗೂಚ್ಚ ನೀಡಿ ಸ್ವಾಗತಿಸಲಾಯಿತು. ಬಳಿಕ ಪಂಚಾಯತ್ ಸದಸ್ಯರ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.