ಆಲಂಕಾರು: ಆಲಂಕಾರು ಗ್ರಾಮದ ಬುಡೇರಿಯಾ ಕೆದಿಲ ಶ್ರೀ ಶಿರಾಡಿ ದೈವಸ್ಥಾನದಲ್ಲಿ ನಾಳೆ ಅ.17ರಂದು ಪುದ್ವಾರ್ ಮೆಚ್ಚಿ ಕಾರ್ಯಕ್ರಮ ನಡೆಯಲಿದೆ.
ತುಲಾ ಕಾವೇರಿ ಸಂಕ್ರಮಣ ಪ್ರಯುಕ್ತ ಬೆಳಿಗ್ಗೆ ದೈವಸ್ಥಾನದಲ್ಲಿ ತೆನೆ ಕಟ್ಟಿದ ನಂತರ ದೈವಕ್ಕೆ ತಂಬಿಲ ನಡೆದ ಬಳಿಕ ಗ್ರಾಮದೈವ ಶಿರಾಡಿ ಮತ್ತು ಗುಳಿಗ ದೈವದ ಭಂಡಾರ ತೆಗೆದು ಗ್ರಾಮದೈವ ಶ್ರೀ ಶಿರಾಡಿ ಮತ್ತು ಗುಳಿಗ ದೈವದ ಪುದ್ವಾರ್ ಮೆಚ್ಚಿಯ ನರ್ತನ ಸೇವೆ ದೈವ ಸಂಕಲ್ಪದಂತೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರು ಅಗಮಿಸಿ ದೈವದ ಗಂಧಪ್ರಸಾದ ಸ್ವೀಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳುವಂತೆ ಊರಿನ ಹತ್ತು ಸಮಸ್ತರ ಪರವಾಗಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸ ಮಜಲು ಪ್ರಕಟಣೆ ತಿಳಿಸಿದ್ದಾರೆ.