ಇನ್ನರ್‌ವ್ಹೀಲ್ ಕ್ಲಬ್‌ನಿಂದ ದರ್ಬೆ ರಸ್ತೆ ವಿಭಾಜಕ ಹೂತೋಟ ಲೋಕಾರ್ಪಣೆ

0

ಪುತ್ತೂರು: ಇನ್ನರ್‌ವ್ಹೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ ‘ಸುಂದರ ನಗರ ನಮ್ಮ ಹೊಣೆ’ ಎಂಬ ಧ್ಯೇಯ ವಾಕ್ಯದೊಂದಿಗೆ ದರ್ಬೆ ರಸ್ತೆ ವಿಭಾಜಕದಲ್ಲಿ ನಿರ್ಮಾಣಗೊಂಡಿರುವ ಹೂತೋಟವು ಅ.16ರಂದು ಲೋಕಾರ್ಪಣೆಗೊಂಡಿತು.


ಲೋಕಾರ್ಪಣೆಗೊಳಿಸಿದ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಇನ್ನರ್‌ವ್ಹೀಲ್ ಕ್ಲಬ್ ಸುಂದರ ಪುತ್ತೂರು, ಸ್ವಚ್ಚ ನಗರ ಸಭೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು.


ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಶಬರೀ ಕಡಿದಾಳ್ ಮಹಿಳೆಯರಿಗೆ ಹೂವಿನ ಗಾರ್ಡನ್ ಅಂದರೆ ಬಹಳಷ್ಟ ಇಷ್ಟ. ಹೀಗಾಗಿ ಗಾರ್ಡನ್ ನಿರ್ಮಾಣ ಮಹಿಳೆಯರೇ ಮಾಡಿದರೆ ಅದು ಇನ್ನಷ್ಟು ಸುಂದರ. ಕ್ಲಬ್‌ನ ಸೇವಾ ಚಟುವಟಿಕೆಗಳಲ್ಲಿ ಗಾರ್ಡನ್ ನಿರ್ಮಿಸಲಾಗಿದ್ದು ಅದರ ನಿರ್ವಹಣೆಗೆ ಕಾಳಜಿವಹಿಸಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.


ನಗರ ಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್‌ನವರ ಸೇವಾ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ. ಜನೋಪಯೋಗಿಯಾಗಿ ಬೆಳೆಯಲಿ ಎಂದರು.
ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಡಾ.ಶ್ರೀಪ್ರಕಾಶ್, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯರಾದ ವಿದ್ಯಾ ಗೌರಿ, ಶಶಿಕಲಾ ಸಿ.ಎಸ್, ಪೌರಾಯುಕ್ತೆ ವಿದ್ಯ ಎಸ್ ಕಾಳೆ ಮಾತನಾಡಿ ಶುಭಹಾರೈಸಿದರು.


ನಗರ ಸಭಾ ಸದಸ್ಯ ಯೂಸುಫ್ ಡ್ರೀಮ್, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್, ರೋಟರಿ ಕ್ಲಬ್‌ನ ಜೈರಾಜ್ ಭಂಡಾರಿ, ದತ್ತಾತ್ರೇಯ ರಾವ್, ಎ.ಜೆ ರೈ, ಪ್ರಶಾಂತ್ ಪೈ, ಉಲ್ಲಾಸ್ ಪೈ ಕುಸುಮ್ ರಾಜ್, ಶಶಿಧರ ಕಿನ್ನಿಮಜಲು, ಉಲ್ಲಾಸ್ ಪೈ, ಉಷಾ ಮೆಡಿಕಲ್‌ನ ಮ್ಹಾಲಕ ಗಣೇಶ್ ಭಟ್, ರೋಟರಿ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು, ಇನ್ನರ್‌ವ್ಹೀಲ್ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ರೂಪಲೇಖಾ ಸ್ವಾಗತಿಸಿ, ಕಾರ್ಯದರ್ಶಿ ಸಂಧ್ಯಾ ಸಾಯ ವಂದಿಸಿದರು. ಮಾಜಿ ಅಧ್ಯಕ್ಷೆ ಸೀಮಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here