ಎಲ್ಇಡಿ ಟಿವಿಗಳ ಮೇಲೆ ಬೊಂಬಾಟ್ ಆಫರ್
ನಮ್ಮೂರ ಟಿವಿ ಬ್ರ್ಯಾಂಡ್ ಎಸ್ಟಿವಿಸಿ ನೀಡುತ್ತಿದೆ ಹಬ್ಬಗಳ ಕೊಡುಗೆ
ಪುತ್ತೂರು: ನಾಡಿನಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಕೇಪು ಪಟಾಕಿ ಸಿಡಿಸುವ ಗನ್ ಹಿಡಿದು ಸುತ್ತಾಡುವ ಮಕ್ಕಳ ಸಂಭ್ರಮಕ್ಕಂತೂ ಪಾರವೇ ಇಲ್ಲ. ಹಣತೆಗಳನ್ನು ಉರಿಸಿ ಫೋಟೋ ತೆಗೆದುಕೊಳ್ಳಲು ಮಹಿಳಾ ಮಣಿಗಳು ರಾತ್ರಿಗಾಗಿ ಕಾಯುತ್ತಿರುತ್ತಾರೆ. ಈಗಂತೂ ಬೆಳಕಿನ ಹಬ್ಬ ಡಿಜಿಟಲ್ಗೆ ಪರಿವರ್ತಿತಗೊಂಡಿದೆ. ಮಣ್ಣಿನ ಹಣತೆಗಳ ಜೊತೆಗೆ ಎಲೆಕ್ಟ್ರಿಕ್ ಮಿನಿಯೇಚರ್ಗಳನ್ನು ಉರಿಸಿ ಮನೆ, ಅಂಗಡಿಗಳನ್ನು ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತಾರೆ. ನೀವು ಕೂಡ ನಿಮ್ಮ ಮನೆಯನ್ನು ಬೆಳಕಿನಿಂದ ಕಂಗೊಳಿಸಲು ಇಚ್ಛಿಸುತ್ತಿದ್ದರೆ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಜಿಎಲ್ ಕಾಂಪ್ಲೆಕ್ಸ್ನಲ್ಲಿ ಶಂಕರ್ಸ್ ಟಿವಿ ಕ್ಲಿನಿಕ್ನಿಂದ ಹಾಕಿರುವ ದೀಪಾವಳಿ ಲೈಟ್ಸ್ ಮಾರಾಟ ಮಳಿಗೆಗೆ ಭೇಟಿ ನೀಡಬಹುದು.
ಕಳೆದ ನಾಲ್ಕು ವರ್ಷಗಳಿಂದ ದೀಪಾವಳಿ ಲೈಟ್ಸ್ ಮಾರಾಟ ಮಳಿಗೆಗಳನ್ನು ಹಾಕುತ್ತಿರುವ ಶಂಕರ್ಸ್ ಟಿವಿ ಕ್ಲಿನಿಕ್, ಪ್ರತೀ ವರ್ಷವೂ ಬೇರೆ ಬೇರೆ ವಿನ್ಯಾಸದ ಲೈಟಿಂಗ್ಸ್ಗಳನ್ನು ಮಾರಾಟ ಮಾಡುತ್ತಿದ್ದಾರೆ. 20 ರೂ.ನಿಂದ ಪ್ರಾರಂಭವಾಗಿ 500 ರೂ. ವರೆಗಿನ ಮಿನಿಯೇಚರ್ಗಳು ಈ ಮಳಿಗೆಯಲ್ಲಿ ಲಭ್ಯವಿದೆ. ನೀರು ಹಾಕಿ ಉರಿಸುವಂತಹ ಎಲೆಕ್ಟ್ರಿಕ್ ಹಣತೆಯನ್ನೂ ಗ್ರಾಹಕರು ಖರೀದಿಸಬಹುದು. ಅಲ್ಲದೆ, ಪ್ರತೀ ಖರೀದಿ ಮೇಲೆ ಉಡುಗೊರೆಯನ್ನು ನೀಡಲಾಗುತ್ತಿದೆ.

ಅ.15 ರಿಂದ ನ.2ರ ವರೆಗೆ ಈ ಮಾರಾಟ ಮಳಿಗೆ ಗ್ರಾಹಕರಿಗಾಗಿ ತೆರೆದಿರುತ್ತದೆ. ಪುತ್ತೂರಿನವರೇ ಆದ ಸತ್ಯಶಂಕರ್ ಭಟ್ ಅವರ ಪ್ರೌಢಿಮೆಗೆ ತಕ್ಕಂತೆ ಅವರ ಬುದ್ಧಿವಂತಿಕೆಯಿಂದ ರೂಪು ಪಡೆದ ಟಿವಿ ಇದಾಗಿದೆ. ಟಿವಿ ಕ್ಷೇತ್ರದಲ್ಲಿ ದುಡಿದ 25 ವರ್ಷಗಳ ಶ್ರಮದ ಸಮೀಕರಣವೇ ಎಸ್ಟಿವಿಸಿ. ಹಲವು ಟಿವಿಗಳನ್ನು ಅಧ್ಯಯನ ಮಾಡಿ, ಸೂರತ್, ಕೋಲ್ಕತ್ತಾ ಹಾಗೂ ದೆಹಲಿ ಇನ್ನೂ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಟಿವಿಯ ತಂತ್ರಜ್ಞಾನಗಳನ್ನು ಆಯ್ದು ತಂದು ಅದರಲ್ಲಿ ಅಡಕವಾಗಿದ್ದ ಉತ್ತಮ ಪರಿಕರಗಳನ್ನು ಜೋಡಿಸಿಕೊಂಡು, ಹೊಸ ಬ್ರ್ಯಾಂಡ್ ಹುಟ್ಟುಹಾಕಲಾಗಿದೆ. ಬಾಲವನ ಪಕ್ಕದ ಬೀರಮಲೆಯಲ್ಲಿ ಇದರ ತಯಾರಿಕಾ ಘಟಕವಿದೆ.