ಪುತ್ತೂರು: ಚಿಕ್ಕಮೂಡ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಅದನ್ನು ಮಾರಾಟ ಮಾಡಲು ತಾತ್ಕಾಲಿಕ ಶೆಡ್ ನಿರ್ಮಿಸಿರುವುದನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಅ.17ರಂದು ಕಾರ್ಯಾಚರಣೆ ನಡೆಸಿ ಶೆಡ್ ತೆರವುಗೊಳಿಸಿದ್ದಾರೆ.

ಚಿಕ್ಕಮುಡ್ನೂರು ಗ್ರಾಮದ ಸ.ನ 101/- ರಲ್ಲಿ 1 ಎಕರೆ ಸರಕಾರಿ ಜಮೀನನ್ನು ರವೂಪ್ ಹಾಗೂ ರಶೀದ್ ಒತ್ತುವರಿ ಮಾಡಿಕೊಂಡು ಅದನ್ನು ಮಾರಾಟ ಮಾಡಲು ತಾತ್ಕಾಲಿಕ ಶೇಡ್ ನಿರ್ಮಿಸಿದ್ದರು. ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಮೀನನ್ನು ತಹಶೀಲ್ದಾರ್ ಅವರ ಅದೇಶದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಶೆಡ್ ತೆರವುಗೊಳಿಸಿ ಜಮೀನನ್ನು ಸರಕಾರದ ವಶಕ್ಕೆ ಪಡೆಯಲಾಗಿದೆ.
ಉಪ್ಪಿನಂಗಡಿಯ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್, ಗ್ರಾಮ ಆಡಳಿತ ಅಧಿಕಾರಿ ಕವಿತಾ ,ಪುತ್ತೂರು ನಗರ ಠಾಣೆಯ ಪೂಲೀಸ್ ಸಿಬ್ಬಂದಿ, ನಗರಸಭಾ ಸಿಬ್ಬಂದಿಗಳು ಹಾಗೂ ಗ್ರಾಮ ಸಹಾಯಕರಾದ ಪುರೋಷೋತ್ತಮ, ಮನೋಹರ್ ಪುಷ್ಪರಾಜ್, ವೀರಪ್ಪ ಗೌಡ ತೆರವು ಕಾರ್ಯಚರಣೆಯಲ್ಲಿ ಸಹಕರಿಸಿದ್ದರು.