ನಮೂನೆ 9,11ಎ ಗೆ ಪಂಚಾಯತ್‌ನಿಂದಲೇ ಅನುಮೋದನೆ

0

ಸಚಿವ ಪ್ರಿಯಾಂಕ್ ಖರ್ಗೆಗೆ ಒಳಮೊಗ್ರು ಗ್ರಾಪಂನಿಂದ ಮನವಿ

ಪುತ್ತೂರು: ನಮೂನೆ 9 ಮತ್ತು 11ಎಗೆ ಪಂಚಾಯತ್ ಮಟ್ಟದಲ್ಲಿ ಅನುಮೋದನೆ ನೀಡಲು ಅಧಿಕಾರ ನೀಡುವಂತೆ ಕೋರಿ ಒಳಮೊಗ್ರು ಗ್ರಾಮ ಪಂಚಾಯತ್‌ನಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಮಾಡಲಾಯಿತು.


ಭೂಪರಿವರ್ತಿತ ಆಸ್ತಿಗಳಿಗೆ ಏಕ ನಿವೇಶನ ವಿನ್ಯಾಸ ಅನುಮೋದನೆ ಮತ್ತು ಕಟ್ಟಡ ಪರವಾನಿಗೆಯ ನಕ್ಷೆಗಳಿಗೆ ಈ ಹಿಂದೆ ಪಂಚಾಯತ್ ಅನುಮೋದನೆ ನೀಡುತ್ತಿದ್ದು ಸದರಿ ಅಧಿಕಾರವನ್ನು ನಗರ ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರಗಳಿಗೆ ಹಸ್ತಾಂತರಿಸಿದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಅಧಿಕಾರವನ್ನು ಪುನಃ ಗ್ರಾಮ ಪಂಚಾಯತ್‌ಗೆ ನೀಡುವಂತೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಪಂಚಾಯತ್ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹದಂತೆ ನಿರ್ಣಯಿಸಲಾಗಿತ್ತು. ಈ ಕುರಿತು ನಿರ್ಣಯ ಪ್ರತಿಯೊಂದಿಗೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here