ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ವತಿಯಿಂದ ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆ “ತಕಧಿಮಿತ” ಕಾರ್ಯಕ್ರಮವು ಅ.19 ರಂದು ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಜರಗಲಿದೆ.
ಉದ್ಘಾಟನೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಜಯಂತ್ ನಡುಬೈಲುರವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ವಹಿಸಿಕೊಳ್ಳಲಿದ್ದಾರೆ. ರೋಟರಿ ಈಸ್ಟ್ ಪೂರ್ವಾಧ್ಯಕ್ಷ ಡಾ.ಸೂರ್ಯನಾರಾಯಣ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಗಳಾದ ಪ್ರಮೀಳಾ ರಾವ್, ಪ್ರಮೋದ್ ಕುಮಾರ್, ಗೌರವ ಅತಿಥಿಗಳಾಗಿ ರೋಟರಿ ವಲಯ ಸೇನಾನಿಗಳಾದ ವಿಜಯಕುಮಾರ್ ಎ, ಭರತ್ ಪೈ, ಉಮಾನಾಥ್ ಪಿ.ಬಿ,ರವರು ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಅವಾರ್ಡ್ ವಿತರಣಾ ಸಮಾರಂಭದಲ್ಲಿ ರೋಟರಿ ಜಿಲ್ಲೆ 3180 ಇದರ ಪಿಡಿಜಿ ಕೃಷ್ಣ ಶೆಟ್ಟಿ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ವಲಯ ಸೇನಾನಿಗಳಾದ ಡಾ.ಪುರುಷೋತ್ತಮ ಕೆ.ಜಿ, ಬಿ.ಜೆ ಶಶಿಧರ್, ಸುರೇಶ್ ಪಿರವರು ಭಾಗವಹಿಸಲಿದ್ದಾರೆ ಎಂದು ರೋಟರಿ ಕ್ಲಬ್ ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಕಾರ್ಯದರ್ಶಿ ನವೀನ್ ರೈ ಪಂಜಳ, ವಲಯ ಸಾಂಸ್ಕೃತಿಕ ಸಂಯೋಜಕಿ ಅಶ್ವಿನಿ ಕೃಷ್ಣನಾರಾಯಣ ಮುಳಿಯ, ಕ್ಲಬ್ ಸಾಂಸ್ಕೃತಿಕ ಚೇರ್ಮನ್ ನವೀನ್ ಶೆಟ್ಟಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.