ಪ್ರಬಂಧ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಲಿಖಿತಾ ಪ್ರಥಮ

0

ಪುತ್ತೂರು: ಮಾನವ ಬಂಧುತ್ವ ವೇದಿಕೆ ,ಕರ್ನಾಟಕ ತಾಲ್ಲೂಕು ಸಮಿತಿ ಪುತ್ತೂರು ಇದರ ವತಿಯಿಂದ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಡೆಸಿದ “ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಸ್ತುತತೆ” ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ದರ್ಬೆ ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜಿನ ದ್ವಿತೀಯ ಬಿ‌. ಕಾಂ ನ ಲಿಖಿತಾ ಪೂಜಾರಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.

ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಹಾಗೂ ಕರಾವಳಿ ಲೇಖಕಿಯರ -ವಾಚಕಿಯರ ಸಂಘ(ರಿ) ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆದ “ಸಾಹಿತ್ಯ ವಿಚಾರಗೋಷ್ಟಿ” ಯಲ್ಲಿ ಪ್ರಬಂಧ ಮಂಡನೆ ಮಾಡಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.ಇವರು ಪುತ್ತೂರು ತಾಲೂಕು ಕುರಿಯ ಗ್ರಾಮದ ಪೊಯ್ಯೆ ಭಾಸ್ಕರ ಪೂಜಾರಿ ಮತ್ತು ಗೀತಾ ಭಾಸ್ಕರ್ ದಂಪತಿಗಳ ಪುತ್ರಿ .

LEAVE A REPLY

Please enter your comment!
Please enter your name here