ಬಡಗನ್ದೂರು: ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ “ದೀಪಾವಳಿ ಗೋಪೂಜೆ”, “ಸುರಭಿ ಕಲಾವಲ್ಲರೀ” ಶಾಸ್ತ್ರೀಯ ನೃತ್ಯ ಹಾಗೂ “ಸಾಮೂಹಿಕ ದೀಪಾವಳಿ ಆಚರಣೆ” ಅ.22ರಂದು ಅಪರಾಹ್ನ 3.30ಕ್ಕೆ ದೇರ್ಲ ಸುರಭಿ ಗೋಶಾಲೆಯ “ಸುರಭಿ ಸಭಾಂಗಣ”ದಲ್ಲಿ ನಡೆಯಲಿದೆ.
ಕಲಾದೀಪ ವಿದ್ವಾನ್ ದೀಪಕ್ ಕುಮಾರ್ ಹಾಗೂ ಬಳಗದವರಿಂದ ಸುರಭಿ ಕಲಾವಲ್ಲರೀ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಪ್ರಸಾದ ಪಡೆದು ಆತಿಥ್ಯವನ್ನು ಸ್ವೀಕರಿಸಿ, ಕಲಾರಸವನ್ನು ಆಸ್ವಾದಿಸುವಂತೆ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.