ಪುತ್ತೂರು: ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯ ಬೆಳ್ಳಿಪ್ಪಾಡಿ ದೇವಸ್ಥಾನದ ಬಳಿಯ ಹೊಸಮನೆ ಅನಂತರಾಮ ಶೆಟ್ಟಿಯವರ ಮನೆಗೆ ಸಿಡಿಲು ಬಡಿದು ಹಾನಿಯುಂಟಾದ ಘಟನೆ ಅ.19ರಂದು ಸಂಜೆ ನಡೆದಿದೆ.
ಸಂಜೆ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ಅನಂತರಾಮ ಶೆಟ್ಟಿಯವರ ಹಂಚಿನ ಮನೆಗೆ ಸಿಡಿಲು ಬಡಿದು ಹಾನಿಯುಂಟಾಗಿದೆ.

ಘಟನೆಯಿಂದಾಗಿ ಮನೆಯ ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಟವಿ, ಫ್ಯಾನ್ ಮೊದಲಾದ ವಿದ್ಯುತ್ ಉಪಕರಣಗಳಿಗೆ ಹಾನಿಯುಂಟಾಗಿದೆ.
ಮನೆಯೊಳಗಿನ ವಿದ್ಯುತ್ ವಯರಿಂಗ್ ಸುಟ್ಟುಹೋಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.