ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಡಿ.4ರಂದು, 3 ದಿನ ಕಾಲ ಆಯೋಜಿಸಲಾಗಿದ್ದ ಕ್ರೀಡೋತ್ಸವವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ ಕ್ರೀಡಾ ಧ್ವಜಾರೋಹಣ ಮಾಡಿ ಉದ್ಘಾಟಿಸಿದರು.

ಆಕರ್ಷಕ ಪಥಸಂಚಲನದೊಂದಿಗೆ ಅರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ವಿವಿಧ ಆಟೋಟಗಳಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟಗಳ ವಿಜೇತ ಚಾಂಪಿಯನ್ ಗಳಾದ ನಿಹಾರಿಕಾ ಎಸ್ ಎಚ್, ಶಿಬಾನಿ ಆರ್ ರೈ, ಆಯುರ್ ವರ್ಷ,ದಿಶಾನ್, ಹಿಶಾಮ್ ಶೇಖ್, ಆದಿತ್ಯ ಸಿದ್ದಾರ್ಥ ಬೌದ್ದ್, ಮನೀಶ್ ಯು ಶೆಟ್ಟಿ, ಮಾನ್ವಿ ಡಿ ಇವರುಗಳು ಕ್ರೀಡಾಜ್ಯೋತಿಯನ್ನು ಗೌರವ ಪೂರ್ವಕ ವೇದಿಕೆಗೆ ಒಯ್ದು, ಅಭ್ಯಾಗತರಿಂದ ಅನುಮೋದನೆಯನ್ನು ಪಡೆದು ಕ್ರೀಡಾಂಗಣದಲ್ಲಿ ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ಕಲಾ ಶಿಕ್ಷಕ ಸದಾಶಿನ ಭಟ್ ರವರಿಂದ ನೂತನವಾಗಿ ನಿರ್ಮಾಣಗೊಂಡ ವಿಜಯ ವೇದಿಕೆಯನ್ನು ದೈ.ಶಿ ಪರಿವೀಕ್ಷಣಾಧಿಕಾರಿಯವರು ಉದ್ಘಾಟಿಸಿದರು.
ಶುಭಹಾರೈಸಿ ಮಾತನಾಡಿದ ಚಕ್ರಪಾಣಿ ಎ ವಿ ಅವರು “ಕ್ರೀಡೆ ಎನ್ನುವುದು ನಾಗರಿಕತೆಯ ಬೆಳವಣಿಗೆಯ ಪ್ರತೀರ. ಮನರಂಜನೆಯ ಜೊತೆಗೆ ಅರೋಗ್ಯ, ಮಾನಸಿಕ ದೃಢತೆವನ್ನು ನೀಡುವ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಇದು ಜೀವನಕ್ಕೆ ಉತ್ತಮ ಪಾಠವಾಗಬಲ್ಲುದು” ಎಂದು ಅಭಿಪ್ರಾಯ ಪಟ್ಟರು. ಬಳಿಕ ಶಾಲೆಯ ಕ್ರೀಡಾಮಂತ್ರಿ ಗಗನ್ ಕ್ರೀಡಾ ಪ್ರಮಾಣ ವಚನವನ್ನು ಎಲ್ಲಾ ಕ್ಲಬ್ ನ ಕ್ರೀಡಾ ನಾಯಕರಿಗೆ ಬೋಧಿಸಿದರು. ಉತ್ತಮ ಪದಸಂಚಲನ ನಡೆಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
‘ಶಾಲಾ’ ಸಂಚಾಲಕರಾದ ರೆ.ವಿಜಯ ಹಾರ್ವಿನ್, ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಅನಂದ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ವಿನೀತಾ ಶೆಟ್ಟಿ, ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ಶಾಲಾ ದೈಹಿಕ ಶಿಕ್ಷಕರಾದ ಪುಷ್ಪರಾಜ್, ಶಾಲೆಯ ಕ್ರೀಡಾಮಂತ್ರಿ ಗಗನ್ ಎ ಜೆ ಮತ್ತು ಉಪ ಕ್ರೀಡಾಮಂತ್ರಿ ಪ್ರತೀಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಪುಷ್ಪರಾಜ್ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರತೀಕ ಧನ್ಯವಾದವನ್ನರ್ಪಿಸಿದರು. ಸಹಶಿಕ್ಷಕಿಯರಾದ ಪೂಜಾ ಎಂ ವಿ ಮತ್ತು ಸುಜಾತ ಮಹೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.